ಅತ್ಯಾಚಾರ ಅಪರಾಧಿಗಳ ಗಲ್ಲು ಶಿಕ್ಷೆಯ ನೀತಿ ಬದಲಿಸಿ: 'ಸುಪ್ರೀಂ'ಗೆ ಕೇಂದ್ರ ಮನವಿ

ನಿರ್ಭಯಾ ಪ್ರಕರಣದ ವಿವಾದದ ಹಿನ್ನೆಲೆಯಲ್ಲಿ, ಮರಣದಂಡನೆಗೆ ಸಂಬಂಧಿಸಿದ 2014ರ ಜನವರಿಯ ತೀರ್ಪಿನಲ್ಲಿ ಮಾರ್ಪಾಡು ಮಾಡಬೇವಂತೆ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ನಿರ್ಭಯಾ ಪ್ರಕರಣದ ವಿವಾದದ ಹಿನ್ನೆಲೆಯಲ್ಲಿ, ಮರಣದಂಡನೆಗೆ ಸಂಬಂಧಿಸಿದ 2014ರ ಜನವರಿಯ ತೀರ್ಪಿನಲ್ಲಿ ಮಾರ್ಪಾಡು ಮಾಡಬೇವಂತೆ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
 
ಅತ್ಯಾಚಾರ ಪ್ರಕರಣ ಸಂಬಂಧ ಮರುಪರಿಶೀಲನಾ ಮತ್ತು ಕ್ಷಮಾದಾನ ಅರ್ಜಿಗಳ ಸಲ್ಲಿಕೆ ಕುರಿತು  ಮಾರ್ಗಸೂಚಿಗಳನ್ನು ರಚಿಸಬೇಕು. ವಂತೆ ಸರ್ಕಾರ ಮನವಿ ಮಾಡಿದೆ.ಮೇಲ್ಮನವಿಗಳನ್ನು ತಿರಸ್ಕರಿಸಿದ ನಂತರ ಮರಣದಂಡನೆ  ಶಿಕ್ಷೆಗೊಳಗಾಗುವ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲು  ಸಮಯದ ಮಿತಿಯನ್ನು  ನಿಗದಿಪಡಿಸಬೇಕು ಎಂದು ಗೃಹ ಸಚಿವಾಲತಯ ತನ್ನ ಅರ್ಜಿಯಲ್ಲಿ ಕೋರಿದೆ.

ಡೆತ್ ವಾರಂಟ್ ಜಾರಿಗೊಳಿಸಿದ ಏಳು ದಿನಗಳಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಬೇಕು. ಮತ್ತು ಅದನ್ನು ನ್ಯಾಯಾಲಯ ತಿರಸ್ಕರಿಸಿದ 14 ದಿನಗಳ ನಂತರ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂಬ ಮಾರ್ಗಸೂಚಿ ರೂಪಿಸುವಂತೆ ಗೃಹ ಸಚಿವಾಲಯ ಮನವಿ ಮಾಡಿದೆ.
 
ಅರ್ಜಿಯನ್ನು ಸಲ್ಲಿಸಬೇಕು ಎಂದು ಉನ್ನತ ನ್ಯಾಯಾಲಯವು ನಿರ್ದೇಶನ ನೀಡಬೇಕು ಎಂದು ಹೇಳಿದೆ.
ಮರಣದಂಡನೆ ಶಿಕ್ಷೆ ಕರುಣೆ ಮನವಿಯನ್ನು ವಜಾಗೊಳಿಸಿದ 14 ದಿನಗಳ ನಂತರ ಗಲ್ಲಿಗೇರಿಸಬೇಕು ಎಂದು ಎಂಎಚ್‌ಎ ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com