ದೇಶ
ಗಡ್ಡವಿರುವ ಮನುಷ್ಯನ ಜೊತೆ ಸಿಎಎ ಕುರಿತು ಚರ್ಚೆ ನಡೆಸಿ: ಅಮಿತ್ ಶಾಗೆ ಒವೈಸಿ ಪಂಥಾಹ್ವಾನ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಅವರ ಜೊತೆಗೆ ಏಕೆ ಚರ್ಚಿಸಬೇಕು, ನನ್ನ ಜೊತೆ ಚರ್ಚೆ ಮಾಡಿ ಬನ್ನಿ ಎಂದು ಇಂಡಿಯಾ ಮಜ್ಲಿಸ್ ಇ ಇಟ್ಟೆಹದುಲ್ ಮುಸ್ಲಿಮೀನ್(ಎಎಂಐಎಂ) ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಆಹ್ವಾನ ನೀಡಿದ್ದಾರೆ.
ಹೈದರಾಬಾದ್; ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಅವರ ಜೊತೆಗೆ ಏಕೆ ಚರ್ಚಿಸಬೇಕು, ನನ್ನ ಜೊತೆ ಚರ್ಚೆ ಮಾಡಿ ಬನ್ನಿ ಎಂದು ಇಂಡಿಯಾ ಮಜ್ಲಿಸ್ ಇ ಇಟ್ಟೆಹದುಲ್ ಮುಸ್ಲಿಮೀನ್(ಎಎಂಐಎಂ) ಮುಖ್ಯಸ್ಥ ಅಸದುದ್ದೀನ್ ಒವೈಸಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಆಹ್ವಾನ ನೀಡಿದ್ದಾರೆ.
ಅವರು ನಿನ್ನೆ ತೆಲಂಗಾಣದ ಕರೀಂನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಸಿಎಎ,ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಚರ್ಚೆಗೆ ನಾನು ಸಿದ್ದನಿದ್ದೇನೆ. ನೀವು ನನ್ನ ಜೊತೆ ಚರ್ಚೆಗೆ ಬನ್ನಿ. ನಾನು ಇಲ್ಲಿದ್ದೇನೆ. ಅವರ ಜೊತೆ ಚರ್ಚೆ ಯಾಕೆ ಮಾಡಬೇಕು, ಗಡ್ಡದ ಮನಷ್ಯನ ಜೊತೆ ಚರ್ಚೆ ನಡೆಸಿ, ನಾನು ಅವರ ಜೊತೆ ಕೂಡ ಸಿಎಎ, ಎನ್ ಪಿಆರ್ ಮತ್ತು ಎನ್ ಆರ್ ಸಿ ಬಗ್ಗೆ ಚರ್ಚೆ ಮಾಡಬಲ್ಲೆ ಎಂದರು.
ವಿರೋಧ ಪಕ್ಷಗಳು ಸಿಎಎ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಲಕ್ನೊದಲ್ಲಿ ನಿನ್ನೆ ಮಾತನಾಡುತ್ತಾ ಅಮಿತ್ ಶಾ ಆರೋಪಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ