

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ, ಹಾಗೂ ಎನ್ ಆರ್ ಸಿ ಪ್ರಸ್ತಾವನೆಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದವು.
ಈ ಪರಿಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದರೂ ಸಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಜನಪ್ರಿಯತೆಗೆ ಧಕ್ಕೆಯಾಗಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.
ಐಎಎನ್ಎಸ್-ಸಿ-ವೋಟರ್ ನಡೆಸಿರುವ ಸಮೀಕ್ಷೆಯ ಪ್ರಕಾರ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿರುವವರ ಪೈಕಿ ಬಹುತೇಕ ಮಂದಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಆಡಳಿತದ ಬಗ್ಗೆ ಸಂತಸವಿದೆ ಎಂದು ಹೇಳಿದ್ದಾರೆ. ಸ್ಟೇಟ್ ಆಫ್ ನೇಷನ್ ನಲ್ಲಿ ಸಮೀಕ್ಷೆಯ ವಿವರಗಳು ಪ್ರಕಟವಾಗಿದ್ದು, ಶೇ.56.4 ರಷ್ಟು ಮಂದಿ, ಸಿಎಎ ಪ್ರತಿಭಟನೆಗಳ ಹೊರತಾಗಿಯೂ ಸಹ ಬಿಜೆಪಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಶೇ.62.3 ರಷ್ಟು ಮಂದಿ ಪ್ರಧಾನಿ ಮೋದಿ ಆಡಳಿತ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement