ಏರ್ ಇಂಡಿಯಾ ವಿಮಾನ ಹಾರಾಟವನ್ನೇ ತಡೆಹಿಡಿದ ಇಲಿ, ಪ್ರಯಾಣಿಕರು ಗಲಿಬಿಲಿ!

ವಿಮಾನ ಹಾರಾಟಕ್ಕೆ ಹಕ್ಕಿಗಳು ಅಡ್ಡಿಯಾಗುತ್ತವೆ ಎನ್ನುವುದು ನಾವೆಲ್ಲಾ ಕೇಳಿದ್ದೇವೆ. ಆದರೆ ಇಲ್ಲಿ ಇಲಿಯೊಂದು ಏರ್ ಇಂಡಿಯಾ ವಿಮಾನವನ್ನು ಹನ್ನೆರಡು ಗಂಟೆಗೂ ಹೆಚ್ಚು ಕಾಲ ತಡೆದು ನಿಲ್ಲಿಸಿದೆ ಎಂದರೆ ನಂಬುವಿರಾ? ಹೌದು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಇಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು.
ವಾರಣಾಸಿ ವಿಮಾನ
ವಾರಣಾಸಿ ವಿಮಾನ

ವಾರಣಾಸಿ: ವಿಮಾನ ಹಾರಾಟಕ್ಕೆ ಹಕ್ಕಿಗಳು ಅಡ್ಡಿಯಾಗುತ್ತವೆ ಎನ್ನುವುದು ನಾವೆಲ್ಲಾ ಕೇಳಿದ್ದೇವೆ. ಆದರೆ ಇಲ್ಲಿ ಇಲಿಯೊಂದು ಏರ್ ಇಂಡಿಯಾ ವಿಮಾನವನ್ನು ಹನ್ನೆರಡು ಗಂಟೆಗೂ ಹೆಚ್ಚು ಕಾಲ ತಡೆದು ನಿಲ್ಲಿಸಿದೆ ಎಂದರೆ ನಂಬುವಿರಾ? ಹೌದು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಇಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು.

ಭಾನುವಾರ ವಿಮಾನ ಟೇಕಾಫ್ ಗೆ ತಯಾರಾಗಿ ರನ್ ವೇ ನಲ್ಲಿ ಓಡುತ್ತಿರುವಾಗ ಕೆಲ ಪ್ರಯಾಣಿಕರು ವಿಮಾನದಲ್ಲಿ ಇಲಿಯನ್ನು ಕಂಡು ಬೆಚ್ಚಿದ್ದಾರೆ. ಹಾಗಾಗಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನಿಡಿದ್ದು ತಕ್ಷಣ ವಿಮಾನವನ್ನು ಹಿಂದಕ್ಕೆ ತರಲಾಗಿದೆ.

ಬಳಿಕ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಇಲಿಗಾಗಿ ಹುಡುಕಾಟ ಪ್ರಾರಂಭವಾಯಿತುಆದರೆ ಇಲಿ ಮಾತ್ರ ಎಲ್ಲಿಯೂ ಪತ್ತೆಯಾಗಿಲ್ಲ.. ಅಂತಿಮವಾಗಿ ವಿಮಾನವನ್ನು ರದ್ದುಗೊಳಿಸಿ ಪ್ರಯಾಣಿಕರನ್ನು  ಹೋಟೆಲ್‌ಗೆ ಕರೆದೊಯ್ಯಲಾಯಿತು ಮತ್ತು ನಂತರ ಇತರ ವಿಮಾನಗಳಲ್ಲಿ ತಮ್ಮ ಗಮ್ಯಸ್ಥಾನಕ್ಕೆ ಕಳುಹಿಸಲಾಗಿತ್ತು.

ಇನ್ನು ಈ ವಿಮಾನವು ವಾರಣಾಸಿಯಿಂದ ಡೆಹ್ರಾಡೂನ್‌ಗೆ ತೆರಳಬೇಕಿತ್ತು. ವಿಮಾನ ಸಂಖ್ಯೆ ಎಐ 691 ವಿಮಾನದಲ್ಲಿ ಈ ಘಟನೆ ನಡೆದಿದೆ. 

ಮತ್ತೆ ಇಲಿಗಾಗಿ ಹುಡುಕಾಟ ನಡೆದಿತ್ತು. ಆದರೆ ಆ ಬಾರಿ ಕೂಡ ಇಲಿ ಪತ್ತೆಯಾಗಿಲ್ಲ."ಇಲಿಯೊಂದಿಗೆ ವಿಮಾನ ಹಾರಾಟ ಸಾಧ್ಯವಿಲ್ಲ. ಕೆಲವೊಮ್ಮೆ ಅದು ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಸಹ ಇದೆ ಎಂದು ಲಖನೌ ಮೂಲದ  ಅಧಿಕಾರಿಯೊಬ್ಬರು ಹೇಳಿದ್ದಾರೆ. .ಅಂತಿಮವಾಗಿ ದೆಹಲಿಯಿಂಡ ಎಂಜಿನಿಯರ್‌ಗಳನ್ನು ಕರೆಸಲಾಯಿತು ಮತ್ತು ಇಲಿಯನ್ನು ಹುಡುಕಲು ಹೊಸ ಪ್ರಯತ್ನಗಳನ್ನು ಮಾಡಲಾಯಿತು.ಆದರೂ ಇಲಿ ಪತ್ತೆಯಾಗದಿದ್ದಾಗ ಕಾಣೆಯಾದ ಇಲಿ ಬದುಕುಳಿಯುವುದಿಲ್ಲ ಎಂದು ಖಾತ್ರ್ಪಡಿಸಿಕೊಳ್ಲಲು ವಿಮಾನದೊಳಗೆ ಕೀಟನಾಶಕವನ್ನು ಸಿಂಪಡಿಸಲಾಯಿತು. ವಿಮಾನವು ಸುಮಾರು 12 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.

ಆದರೂ ಸಹ ಇದುವರೆಗೆ ಇಲಿ ಜೀವಂತವಾಗಿಯಾಗಲಿ, ಸತ್ತಸ್ಥಿತಿಯಲ್ಲಾಗಲಿ ಪತ್ತೆಯಾಗಿಲ್ಲ. ಇದೀಗ ದಿನದ ತರುವಾಯ ವಿಮಾನ ಮತ್ತೆ ಹಾರಾಟ ಮುಂದುವರಿಸಿದ್ದು ವಾರಣಾಸಿಯಿಂದ ಡೆಹ್ರಾಡೂನ್ ಗೆ ಪಯಣಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com