ಉದ್ಧವ್ ಠಾಕ್ರೆ ಅಯೋಧ್ಯೆಗೆ ತೆರಳಿದರೆ ಬಾಬರಿ ಮಸೀದಿ ನಿರ್ಮಾಣಕ್ಕಾಗಿ ನಾನೂ ಬರುವೆ: ಫರ್ಹಾನ್ ಅಜ್ಮಿ
ಮುಂಬೈ: ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಸದಸ್ಯರೊಡನೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಗೆ ತೆರಳುವುದಾದರೆ ತಾನೂ ಅವರೊಡನೆ ಹೋಗಲು ಸಿದ್ದ ಎಂದು ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ ಅವರ ಪುತ್ರ ಫರ್ಹಾನ್ ಅಜ್ಮಿ ಹೇಳಿದ್ದಾರೆ.
"ನಾನು ಎಚ್ಚರಿಸುತ್ತಿದ್ದೇನೆ, ಇದನ್ನು ಬೆದರಿಕೆ ಎಂದು ಬೇಕಾದರೂ ಪರಿಗಣಿಸಿಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿಮಾರ್ಚ್ 7ಕ್ಕೆ ಅಯೋಧ್ಯೆಗೆ ತೆರಳುವುದಾದರೆ ನಾನೂ ಸಹ ಅವರೊಡನೆ ಹೋಗಲು ಸಿದ್ದ, ಇಷ್ಟೇ ಅಲ್ಲದೆ ನನ್ನ ತಂದೆಯನ್ನೂ ಬರಲು ಕೇಳಿಕೊಳ್ಳುತ್ತೇನೆ. ಎಂವಿಎ ಮತ್ತು ಎಸ್‌ಪಿ ಪಕ್ಷದ ಸದಸ್ಯರು ಶ ನೂರಾರು ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಾನು ಕರೆ ನೀಡುತ್ತೇನೆ."ಅಜ್ಮಿ ಹೇಳಿದ್ದಾರೆ.
"ಉದ್ಧವ್ ಠಾಕ್ರೆ ಅವರು ಅಯೋಧ್ಯೆಗೆತೆರಳುವುದು ಖಚಿತವಾದರೆರೆ ನಾವೆಲ್ಲರೂ ಅಯೋಧ್ಯೆಗೆ ಪಾದಯಾತ್ರೆ ನಡೆಸುತ್ತೇವೆ ಆದರೆ ಅವರು ರಾಮ ಮಂದಿರ ನಿರ್ಮಿಸಿದ್ದರೆ ನಾವು ಬಾಬರಿ ಮಸೀದಿಯನ್ನು ನಿರ್ಮಿಸುತ್ತೇವೆ"
"ನಿಮ್ಮ ಸರ್ಕಾರದ 100 ದಿನಗಳು ಮುಗಿದ ನಂತರ ನೀವು ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಏಕೆ ಹೋಗಬಾರದು? ಸಿದ್ಧಿ ವಿನಾಯಕನಲ್ಲಿ ನಿಮಗೆ ನಂಬಿಕೆ ಇಲ್ಲವೆ?" ಅಜ್ಮಿ ಠಾಕ್ರೆ ಅವರನ್ನು ಕೆಣಕಿದ್ದಾರೆ. ತಿದ್ದುಪಡಿ ಮಾಡಿದ ಪೌರತ್ವ ಕಾನೂನನ್ನು ವಿರೋಧಿಸಲು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಜ್ಮಿ ಈ ಹೇಳಿಕೆ ನೀಡಿದ್ದಾರೆ.
ಮಹಾ ವಿಕಾಸ್ ಅಘಾಡಿ ಸರ್ಕಾರದ 100 ದಿನಗಳ ಪೂರ್ಣಗೊಂಡ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಗವಾನ್ ಶ್ರೀರಾಮನಿಗೆ ಗೌರವ ಸಲ್ಲಿಸಲು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಮೈತ್ರಿ ಪಾಲುದಾರರು (ಕಾಂಗ್ರೆಸ್, ಎನ್‌ಸಿಪಿ) ಸಹ ಅಯೋಧ್ಯೆಗೆ ಮುಖ್ಯಮಂತ್ರಿಗಳೊಡನೆ ಹೋಗಬಹುದು ಎಂದು ಶಿವಸೇನೆ ವಕ್ತಾರ ಸಂಜಯ್ ರೌತ್ ಜನವರಿ 22 ರಂದು ಹೇಳಿದದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ