ಎಲ್ಲ ಸುಸೂತ್ರವಾಗಿ ನಡೆದರೆ 2021ರ ಆರಂಭಕ್ಕೆ 'ಕೊವಾಕ್ಸಿನ್' ಲಭ್ಯ: ಕೊರೋನಾಕ್ಕೆ ಸಿಗಲಿದೆಯೇ ಲಸಿಕೆ?

ಕೊವಕ್ಸಿನ್ ನ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಪ್ರಾಧಿಕಾರಗಳು ಒಪ್ಪಿಗೆ ನೀಡಿದರೆ 2021ರ ಆರಂಭದಲ್ಲಿ ಕೊರೋನಾ ಸೋಂಕಿಗೆ ಜನರಿಗೆ ಔಷಧಿ ಸಿಗಲಿದೆ ಎಂದು ಭರತ್ ಬಯೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಡಾ ಕೃಷ್ಣ ಎಲ್ಲಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಸುಮಿ ಸುಕನ್ಯಾ ದತ್ತ ಜತೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊವಕ್ಸಿನ್ ನ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಪ್ರಾಧಿಕಾರಗಳು ಒಪ್ಪಿಗೆ ನೀಡಿದರೆ 2021ರ ಆರಂಭದಲ್ಲಿ ಕೊರೋನಾ ಸೋಂಕಿಗೆ ಜನರಿಗೆ ಔಷಧಿ ಸಿಗಲಿದೆ ಎಂದು ಭರತ್ ಬಯೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಡಾ ಕೃಷ್ಣ ಎಲ್ಲಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಸುಮಿ ಸುಕನ್ಯಾ ದತ್ತ ಜತೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಾನವನ ಮೇಲೆ ಕೊವಕ್ಸಿನ್ ನ ಪ್ರಯೋಗ ಕೋವಿಡ್-19ನ ಈ ಸಂಕಷ್ಟ ಕಾಲದಲ್ಲಿ ಒಂದು ಸಣ್ಣ ಮಟ್ಟಿಗೆ ಜನರಲ್ಲಿ ಆಶಾಕಿರಣ ಮೂಡಿಸಿದೆ. ಈ ಲಸಿಕೆ ಹುಟ್ಟಿನ ಬಗ್ಗೆ ಹೇಳಿ.

-ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿ ಜೊತೆ ಸೇರಿಕೊಂಡು ಭರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಲಸಿಕೆಯಿದು. ರೋಗಲಕ್ಷಣವಿಲ್ಲದ ಕೊರೋನಾ ಪಾಸಿಟಿವ್ ವ್ಯಕ್ತಿಯ ದೇಹದಿಂದ ವೈರಸ್ ನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ ತೆಗೆದುಕೊಂಡು ಅದನ್ನು ಕಳೆದ ಮೇ ತಿಂಗಳಲ್ಲಿ ನಮಗೆ ಕಳುಹಿಸಿತು. ಸಕ್ರಿಯರಹಿತ ಲಸಿಕೆ ಸತ್ತ ವೈರಸ್ ಅಭಿವೃದ್ಧಿಪಡಿಸಲು ಹೈದರಾಬಾದ್ ನ ನಮ್ಮ ಅತಿ ಕಂಟೈನ್ ಮೆಂಟ್ ಕೇಂದ್ರದಲ್ಲಿ ಬಳಸಿಕೊಂಡೆವು.

ಪೂರ್ವ ಕ್ಲಿನಿಕಲ್ ಹಂತದಲ್ಲಿ ಅಧ್ಯಯನ ನಡೆಸುವಾಗ ಲಸಿಕೆಯನ್ನು ಇತರ ಪ್ರಾಣಿಗಳ ಮೇಲೆ ಬಳಸಿದ್ದುಂಟೇ?
-ಹೌದು, ಪ್ರಾಣಿಗಳ ಮೇಲೆ ನಡೆಸಲಾಗಿದ್ದು ಯಶಸ್ಸು ಸಿಕ್ಕಿದೆ, ಇನ್ನು ಮಾನವರ ಮೇಲೆ ಪ್ರಯೋಗ ಮಾಡುತ್ತೇವೆ.

ಮೊದಲ ಮತ್ತು ಎರಡನೇ ಹಂತದ ಪ್ರಯೋಗಗಳು ಮುಗಿದ ನಂತರ ಮುಂದಿನ ಹಂತಕ್ಕೆ ಯಾವಾಗ ಹೋಗುತ್ತದೆ?
ಮಾನವರ ಮೇಲೆ ಇದು ಎಷ್ಟು ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಕ್ಲಿನಿಕಲ್ ಪ್ರಯೋಗ ಇನ್ನಷ್ಟೇ ಆರಂಭವಾಗಬೇಕಿದೆ. ಮೊದಲ ಮತ್ತು ಎರಡನೇ ಹಂತದ ಪ್ರಯೋಗಗಳು ಯಶಸ್ವಿಯಾದದ್ದರ ಮೇಲೆ ಆಧಾರವಾಗಿಟ್ಟುಕೊಂಡು ಕ್ಲಿನಿಕಲ್ ಪ್ರಯೋಗಕ್ಕೆ ಹೆಜ್ಜೆಯಿರಿಸುತ್ತೇವೆ.

ಎಲ್ಲವೂ ಸರಿಯಾದರೆ ಸಾರ್ವಜನಿಕವಾಗಿ ಲಭ್ಯವಾಗಲು ಎಷ್ಟು ಸಮಯ ಹಿಡಿಯಬಹುದು?
ಎಲ್ಲಾ ಪ್ರಯೋಗಗಳನ್ನು ಸುರಕ್ಷಿತವಾಗಿ ಮತ್ತು ಅತ್ಯುತ್ತಮ ಗುಣಮಟ್ಟದಲ್ಲಿ ಮಾಡುತ್ತಿದ್ದು ಪ್ರಾಧಿಕಾರಗಳು ಒಪ್ಪಿಗೆ ಕೊಟ್ಟು ಯಶಸ್ವಿಯಾದರೆ ಮುಂದಿನ ವರ್ಷದ ಆರಂಭದ ಹೊತ್ತಿಗೆ ಸಾರ್ವಜನಿಕವಾಗಿ ಸಿಗಬಹುದು.

ಈ ಲಸಿಕೆ ವಾಣಿಜ್ಯ ಮಟ್ಟದಲ್ಲಿ ಸಿಗಲು ಆರಂಭವಾದರೆ ಬೆಲೆ ಎಷ್ಟಿರಬಹುದು?
ವಿಶ್ವದರ್ಜೆಯ ಮಟ್ಟದ ಲಸಿಕೆ ಕೈಗೆಟಕುವ ದರದಲ್ಲಿ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇಂತಹ ಕೆಲಸವನ್ನು ಈ ಹಿಂದೆ ಕೂಡ ಮಾಡಿದ್ದು ಕೊವಾಕ್ಸಿನ್ ಗೂ ಸಹ ಅದನ್ನೇ ಮಾಡುತ್ತೇವೆ. ಇದರ ಬೆಲೆ ಬಗ್ಗೆ ಈಗಲೇ ಹೇಳುವುದು ಕಷ್ಟ.

ಸಾರ್ವಜನಿಕ ಬಳಕೆಗೆ ಅನುಮತಿ ಸಿಕ್ಕಿದರೆ ಅದನ್ನು ಸಾಮೂಹಿಕವಾಗಿ ಹೇಗೆ ವಿತರಣೆ ಮಾಡುತ್ತೀರಿ?
ಪ್ರಸ್ತುತ ಕೋವಿಡ್-19 ಲಸಿಕೆಗೆ ಬೇಡಿಕೆ ಅಧಿಕವಾಗಿದೆ. ನಮ್ಮ ಕಂಪೆನಿ ಎಲ್ಲವನ್ನೂ ಪೂರೈಸಲು ಸಾಧ್ಯವಿಲ್ಲ. ವರ್ಷವೊಂದಕ್ಕೆ 300 ದಶಲಕ್ಷ ಡೋಸ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ನಮ್ಮಲ್ಲಿದೆ. ಲಸಿಕೆ ಉತ್ಪಾದಿಸಲು ಹೆಚ್ಚಿನ ಕಂಪೆನಿಗಳು ಮುಂದಾಗಬೇಕು.

ಇಂದು ಇಡೀ ವಿಶ್ವದಲ್ಲಿ ಸುಮಾರು 140 ಕಂಪೆನಿಗಳಲ್ಲಿ ಕೋವಿಡ್-19ಗೆ ಲಸಿಕೆ ಕಂಡುಹಿಡಿಯುತ್ತಿರುವ ಕಾರ್ಯ ನಡೆಯುತ್ತಿದ್ದು ಅವುಗಳಲ್ಲಿ 16 ಕಂಪೆನಿಗಳು ಕ್ಲಿನಿಕಲ್ ಪ್ರಯೋಗದ ಹಂತ ತಲುಪಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅವುಗಳಲ್ಲಿ ಚೀನಾ ದೇಶದಲ್ಲಿ 5, ಅಮೆರಿಕದಲ್ಲಿ 3, ಇಂಗ್ಲೆಂಡ್ ನಲ್ಲಿ 2, ಜರ್ಮನಿ, ರಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ತಲಾ ಒಂದು ಕಂಪೆನಿಗಳು ಕ್ಲಿನಿಕಲ್ ಪ್ರಯೋಗ ಹಂತ ತಲುಪಿವೆ.

ಭಾರತದ ಭರತ್ ಬಯೋಟೆಕ್ ಕಂಪೆನಿಯ ಮೊದಲ ಮತ್ತು ಎರಡನೇ ಹಂತ ಯಶಸ್ವಿಯಾದರೆ ಪ್ರಾಧಿಕಾರದಿಂದ ಈ ವಾರ ಒಪ್ಪಿಗೆ ಸಿಕ್ಕಿದರೆ ಭಾರತ ಕೂಡ ದೇಶಿ ಅಭಿವೃದ್ಧಿತ ಲಸಿಕೆಯನ್ನು ಕೋವಿಡ್-19ಗೆ ಕಂಡುಹಿಡಿಯುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com