ಕೋವಿಡ್ ಬಿಕ್ಕಟ್ಟಿನ ಮಧ್ಯೆ ಪಾಕ್ ನಲ್ಲಿ ಸಿಲುಕಿದ ತಾಯಿ: ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಭಾರತೀಯ ಮಕ್ಕಳು!

ಕೋವಿಡ್ ಬಿಕ್ಕಟಿನ ಮಧ್ಯೆ ತಾಯಿ ಪಾಕಿಸ್ತಾನದಲ್ಲಿ ಸಿಲುಕಿರುವುದರಿಂದ ಭಾರತದಲ್ಲಿರುವ ಆರು ವರ್ಷದ ಕಾಂಚನಾ ಹಾಗೂ ಆಕೆಯ ಇಬ್ಬರು ಸಹೋದರರು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಜೋಧ್ ಪುರದಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿರುವ ಲೀಲಾರಾಮ್ ಮಾಲಿ
ಜೋಧ್ ಪುರದಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿರುವ ಲೀಲಾರಾಮ್ ಮಾಲಿ

ಜೈಪುರ: ಕೋವಿಡ್ ಬಿಕ್ಕಟಿನ ಮಧ್ಯೆ ತಾಯಿ ಪಾಕಿಸ್ತಾನದಲ್ಲಿ ಸಿಲುಕಿರುವುದರಿಂದ ಭಾರತದಲ್ಲಿರುವ ಆರು ವರ್ಷದ ಕಾಂಚನಾ ಹಾಗೂ ಆಕೆಯ ಇಬ್ಬರು ಸಹೋದರರು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಅಸಹಾಯಕ ತಾಯಿ ಜುಂಟಾ ಪಾಕಿಸ್ತಾನದ ಸಿಂಧೂ ಪ್ರಾಂತ್ಯದಲ್ಲಿ ಸಿಲುಕಿದ್ದು,ಕಳೆದ ವಾರ ತಂದೆ ಲೀಲಾರಾಮ್ ಜೊತೆಗೆ ಜೋಧ್ ಪುರಕ್ಕೆ ಬಂದಾಗಿನಿಂದಲೂ ನಿತ್ಯ ಕಣ್ಣೀರು ಹಾಕುತ್ತಿದ್ದಾರೆ.

ರಾಜಸ್ಥಾನದ ಜೋಧ್ ಪುರದ ಈ ನತದೃಷ್ಟ ಕುಟುಂಬ ಕೋವಿಡ್ ಬಿಕ್ಕಟ್ಟು ಹಾಗೂ ಭಾರತ- ಪಾಕಿಸ್ತಾನ ನಡುವಣ ಹದಗೆಟ್ಟ ಸಂಬಂಧದ ಹೊಡೆತಕ್ಕೆ ಸಿಲುಕಿ ನರಳುತ್ತಿದೆ.ಲೀಲಾರಾಮ್ ಮಾಲಿ 1986ರಿಂದ ಪಾಕಿಸ್ತಾನದಿಂದ ಬಂದಿದ್ದು ಭಾರತದ ಪೌರತ್ವ ಪಡೆದಿದ್ದಾರೆ. 12 ವರ್ಷಗಳ ಹಿಂದೆ ಅವರು ಪಾಕಿಸ್ತಾನದ ಹಿಂದೂ ಧರ್ಮದ ಜುಂಟಾ ಅವರನ್ನು ಮದುವೆಯಾಗಿದ್ದಾರೆ.ಆದರೆ, ಜುಂಟಾ ಇನ್ನೂ ಭಾರತೀಯ ಪೌರತ್ವ ಪಡೆದಿಲ್ಲ.  

ಫೆಬ್ರವರಿ ತಿಂಗಳಲ್ಲಿ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಜುಂಟಾ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಪಾಕಿಸ್ತಾನದ ಮಿರ್ ಪುರ್ ಖಾಸ್ ಗೆ ತೆರಳಿದ್ದರು. ದುರಾದೃಷ್ಟವಶಾತ್, ಕೋವಿಡ್-19 ಲಾಕ್ ಡೌನ್  ಕಾರಣದಿಂದಾಗಿ ಏಪ್ರಿಲ್ ನಲ್ಲಿ ಭಾರತ- ಪಾಕ್ ನಡುವಣ ರೈಲು ಸೇವೆ ಸ್ಥಗಿತಗೊಂಡಿದ್ದರಿಂದ  ಇಡೀ ಕುಟುಂಬದ ವೀಸಾ ಅವಧಿ ಮುಗಿದಿದೆ.

ಗಡಿಯಲ್ಲಿ ಸಿಲುಕಿರುವ ಜನರಿಗಾಗಿ ವಿಶೇಷ ರೈಲು ಓಡಿಸಲು ಉಭಯ ದೇಶಗಳು ಸಮ್ಮತಿ ನೀಡಿದ್ದರಿಂದ ಈ ಕುಟುಂಬ ಭಾರತಕ್ಕೆ ಮರಳಲು ಯೋಜಿಸಿತ್ತು.ಆದಾಗ್ಯೂ, ಲೀಲಾ ರಾಮ್ ಮತ್ತು ಅವರ ಮೂವರು ಮಕ್ಕಳು ಭಾರತೀಯ ಪೌರತ್ವ ಪಡೆದಿದ್ದರಿಂದ ದೇಶದೊಳಗೆ ಬಿಡಲಾಗಿದೆ. ಜುಂಟಾ ( 33) ರನ್ನು ದೇಶದೊಳಗೆ ಬಿಟ್ಟುಕೊಂಡಿಲ್ಲ.ಇದರಿಂದಾಗಿ ಲೀಲಾ ರಾಮ್ ಜೋಧ್ ಪುರದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರೆ ಜುಂಟಾ ಪಾಕಿಸ್ತಾನದ ಮೀರ್ ಪುರ್ ಖಾಸ್ ನಲ್ಲಿಯೇ ಸಿಲುಕಿದ್ದಾರೆ.

ಇಸ್ಲಾಮಾಬಾದಿನ ಭಾರತೀಯ ರಾಯಬಾರಿ ಕಚೇರಿಯಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇ. ಆದರೆ, ಅಧಿಕಾರಿಗಳು ತನ್ನ ಪತ್ನಿ ಭಾರತಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ ಎಂದು ಲೀಲಾರಾಮ್ ಹೇಳಿದ್ದಾರೆ. ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮೀಷನ್ ಗೆ ಅಗತ್ಯ ಸೂಚನೆ ಕಳುಹಿಸಬೇಕೆಂದು ಸೀಮಾಂತ್ ಲೋಕ್ ಸಂಘಟನೆಯ ಅಧ್ಯಕ್ಷ ಹಿಂದೂ ಸಿಂಗ್ ಸೋದಾ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com