ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ನನಗೆ ವೇತನ ಬೇಡ, ಮಂತ್ರಿ ಪದವಿ ಕೊಡಿ: ಶಿವರಾಜ್ ಸಿಂಗ್ ಚೌಹಾಣ್ ಗೆ ಮಾಜಿ ಇಂಜಿನಿಯರ್ ಪತ್ರ!

ವೇತನವನ್ನೇನು ಕೊಡಬೇಡಿ, ಆದರೆ ನನಗೆ ಮಂತ್ರಿಮಂಡಲದಲ್ಲಿ ಸ್ಥಾನ ಕೊಡಿ ಎಂಬ ವಿಚಿತ್ರ ಬೇಡಿಕೆಯೊಂದನ್ನು ಮಧ್ಯಪ್ರದೇಶದ ಮಾಜಿ ಇಂಜಿನಿಯರ್ ಒಬ್ಬರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮುಂದಿಟ್ಟಿದ್ದಾರೆ. 
Published on

ಭೋಪಾಲ್: ವೇತನವನ್ನೇನು ಕೊಡಬೇಡಿ, ಆದರೆ ನನಗೆ ಮಂತ್ರಿಮಂಡಲದಲ್ಲಿ ಸ್ಥಾನ ಕೊಡಿ ಎಂಬ ವಿಚಿತ್ರ ಬೇಡಿಕೆಯೊಂದನ್ನು ಮಧ್ಯಪ್ರದೇಶದ ಮಾಜಿ ಇಂಜಿನಿಯರ್ ಒಬ್ಬರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮುಂದಿಟ್ಟಿದ್ದಾರೆ. 

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆ ನಿವೃತ್ತ ಇಂಜಿನಿಯರ್ ಬಾಲ್ ಚಂದ್ ವರ್ಮಾ ಬರೆದಿರುವ ಪತ್ರದಲ್ಲಿ " ವಿಧಾನಸಭೆಯ ಸದಸ್ಯರೂ ಅಲ್ಲದ 14 ವ್ಯಕ್ತಿಗಳು ಮಂತ್ರಿ ಮಂಡಲದಲ್ಲಿದ್ದಾರೆ. ಸಾಮಾನ್ಯ ಪ್ರಜೆಗಳಾದ 14 ವ್ಯಕ್ತಿಗಳು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ 2013-18 ರ ಅವಧಿಯಲ್ಲಿ ಇದೇ ಮಾದರಿಯಲ್ಲಿ 5 ಜನರು ಸವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನನ್ನ ಪತ್ರ ಬಂದು ತಲುಪಿದ 3 ದಿನಗಳಲ್ಲಿ ನನ್ನನ್ನೂ ಸಹ ಸಚಿವನನ್ನಾಗಿ ಮಾಡಿ.

ನನ್ನನ್ನು ಸಚಿವರನ್ನಾಗಿ ಮಾಡಿದರೂ ನನಗೆ ವೇತನ ಪಡೆಯುವ ಆಸಕ್ತಿ ಇಲ್ಲ. ಒಂದು ವೇಳೆ ನನ್ನನ್ನು ಸಚಿವರನ್ನಾಗಿ ಮಾಡದೇ ಇದ್ದರೆ, ಶಾಸನಸಭೆಯ ಸದಸ್ಯರಲ್ಲದ 14 ಜನರನ್ನು ಮಂತ್ರಿಮಂಡಲದಿಂದ ಕೈಬಿಡಿ ಎಂದು ಬಾಲ್ ಚಂದ್ ವರ್ಮಾ ಆಗ್ರಹಿಸಿದ್ದಾರೆ.
 ಒಂದು ವೇಳೆ ತಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಂದಾಗುವುದಕ್ಕೆ ಮುಖ್ಯಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com