ಸಚಿನ್ ಪೈಲಟ್ ಜೊತೆಗಿನ ಸ್ನೇಹ: ಪರಿಸ್ಥಿತಿ ನಿಭಾಯಿಸುವ ಹೊಣೆ ಜ್ಯೋತಿರಾದಿತ್ಯ ಸಿಂಧಿಯಾ ಹೆಗಲಿಗೆ ಹಾಕಿದ ಬಿಜೆಪಿ

ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ತೆಗೆದುಹಾಕುವ ಮೂಲಕ ರಾಜಸ್ತಾನದಲ್ಲಿ ಕಾಂಗ್ರೆಸ್ ಪಾರ್ಟಿ ಎರಡು ಬಣವಾಗಿದೆ. ಸಚಿನ್ ಪೈಲಟ್ ಮತ್ತು ಅವರೊಂದಿಗೆ ಹತ್ತಾರು ಶಾಸಕರು ಇರುವುದು ವಿರೋಧ ಪಕ್ಷ ಬಿಜೆಪಿಗೆ ಸಹಜವಾಗಿ ಖುಷಿ ತಂದಿದೆ.
ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್(ಸಂಗ್ರಹ ಚಿತ್ರ)
ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್(ಸಂಗ್ರಹ ಚಿತ್ರ)

ಜೈಪುರ: ಉಪ ಮುಖ್ಯಮಂತ್ರಿ ಹುದ್ದೆ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ತೆಗೆದುಹಾಕುವ ಮೂಲಕ ರಾಜಸ್ತಾನದಲ್ಲಿ ಕಾಂಗ್ರೆಸ್ ಪಾರ್ಟಿ ಎರಡು ಬಣವಾಗಿದೆ. ಸಚಿನ್ ಪೈಲಟ್ ಮತ್ತು ಅವರೊಂದಿಗೆ ಹತ್ತಾರು ಶಾಸಕರು ಇರುವುದು ವಿರೋಧ ಪಕ್ಷ ಬಿಜೆಪಿಗೆ ಸಹಜವಾಗಿ ಖುಷಿ ತಂದಿದೆ. ರಾಜಸ್ತಾನದಲ್ಲಿ ಕೂಡ ಅಧಿಕಾರ ಪಡೆಯುವ ಅದರ ಆಸೆ ಗರಿಗೆದರಿದೆ.

ಪ್ರಸ್ತುತ ಕಾಂಗ್ರೆಸ್ ನಲ್ಲಿ ನಡೆದಿರುವ ಬೆಳವಣಿಗೆಗೆ ತಾನು ಹೊಣೆಯಲ್ಲ, ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರೂ ಕೂಡ ಮೊನ್ನೆ ಅಶೋಕ್ ಗೆಹ್ಲೊಟ್ ಆಪ್ತರ ನಿವಾಸದ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದಿದ್ದರಲ್ಲಿ ಬಿಜೆಪಿಯ ಪಾತ್ರ ಇರಲಿಕ್ಕಿಲ್ಲ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮುಂದಿನ ಕಾರ್ಯಕ್ಕೆ ಕೈಹಾಕುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯ ಬಿಜೆಪಿ ನಾಯಕರು ನಿನ್ನೆ ಜೈಪುರದಲ್ಲಿ ಸಭೆ ಸೇರಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ,ಈ ಬೆಳವಣಿಗೆ ಯಾವ ದಿಕ್ಕಿನತ್ತ ಸಾಗಲಿದೆ ಎಂದು ಬಿಜೆಪಿ ಪರಾಮರ್ಶೆ ನಡೆಸುತ್ತಿದೆ. ಬಹುಮತ ಸಾಬೀತಿನಿಂದ ಸ್ಪಷ್ಟ ಚಿತ್ರಣ ಸಿಗಲಿದ್ದು, ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿರುವುದಂತೂ ಸತ್ಯ ಎಂದಿದ್ದಾರೆ.

ರಾಜಸ್ತಾನದ ಪರಿಸ್ಥಿತಿಯನ್ನು ಅವಲೋಕಿಸಿ ಸಚಿನ್ ಪೈಲಟ್ ಜೊತೆ ಮಾತನಾಡಿ ರಾಜಕೀಯವಾಗಿ ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡುವ ವಾತಾರವಣವನ್ನು ಪೈಲಟ್ ಸ್ನೇಹಿತ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಅವರು ಜವಾಬ್ದಾರಿ ವಹಿಸಿದ್ದಾರೆ. ಆದರೆ ಕಳೆದ ಬಾರಿ ಮಧ್ಯ ಪ್ರದೇಶದಲ್ಲಿನ ರಾಜಕೀಯ ಪರಿಸ್ಥಿತಿಗೂ ರಾಜಸ್ತಾನದ ಪರಿಸ್ಥಿತಿಗೂ ವ್ಯತ್ಯಾಸವಿರುವುದರಿಂದ ಬಿಜೆಪಿ ಆತುರಪಡುವ ಲಕ್ಷಣ ಕಾಣುತ್ತಿಲ್ಲ. ಮರುಭೂಮಿ ರಾಜ್ಯದಲ್ಲಿ ಸರ್ಕಾರ ಉರುಳಿಸುವುದು ಅಷ್ಟು ಸುಲಭವಾಗಿಲ್ಲ. ಸಚಿನ್ ಪೈಲಟ್ ಗಿರುವುದು ಇನ್ನು ಎರಡೇ ಆಯ್ಕೆ, ಒಂದು ಬಿಜೆಪಿಗೆ ಸೇರುವುದು, ಇಲ್ಲವೇ ಹೊಸ ಪಕ್ಷ ಸ್ಥಾಪಿಸುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com