ರಾಮ ಮಂದಿರ ನಿರ್ಮಾಣ: ಅ.5 ರಂದು ಪಿಎಂ ಭೂಮಿ ಪೂಜೆ?

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ  ಭೂಮಿ ಪೂಜೆಗೆ ಅನುಮತಿ ಕೋರಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಹೆಚ್ಚು ಕಡಿಮೆ ಆ.5ರಂದು  ರಂದು ಪೂಜೆ ನೆರವೇರಲಿದೆ.
ರಾಮ ಮಂದಿರ
ರಾಮ ಮಂದಿರ

ನವದೆಹಲಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ  ಭೂಮಿ ಪೂಜೆಗೆ ಅನುಮತಿ ಕೋರಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಹೆಚ್ಚು ಕಡಿಮೆ ಆ.5ರಂದು  ರಂದು ಪೂಜೆ ನೆರವೇರಲಿದೆ.

ಭೂಮಿ ಪೂಜೆಯ ತಾತ್ಕಾಲಿಕ ದಿನಾಂಕವನ್ನು ಟ್ರಸ್ಟ್ ನಮೂದಿಸಿದ್ದು, ಅಂತಿಮ ನಿರ್ಧಾರವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಕೈಗೊಳ್ಳಲಿದೆ.

ಶನಿವಾರ ಅಯೋಧ್ಯೆಯ ಸರ್ಕ್ಯುಟ್ ಹೌಸ್ ನಲ್ಲಿ ಟ್ರಸ್ಟ್ ನ ಸಭೆ ನಡೆಸಲಾಗಿತ್ತು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಕೊರೋನಾ ಸೋಂಕಿನ ಕಾರಣ  ಭೂಮಿ ಪೂಜೆಯ  ದಿನಾಂಕವನ್ನು ನಾವು ಪ್ರಧಾನಿ ಕಚೇರಿಗೆ ಕಳುಹಿಸಿದ್ದೇವೆ.ಅಲ್ಲಿ ಪೂಜೆಯ ದಿನಾಂಕ ಅಂತಿಮವಾಗಲಿದೆ ಎಂದರು. ಹೆಚ್ಚು ಕಡಿಮೆ ಆಗಸ್ಟ್ 5 ರಂದು  ಭೂಮಿ ಪೂಜೆ ನೆರವೇರುವುದು ಖಚಿತ  ಎಂದೂ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com