ಪುದುಚೆರಿ ವಿಧಾನಸಭೆ: ಬಜೆಟ್ ಅಧಿವೇಶನ ಆರಂಭಕ್ಕೆ ಲೆ. ಗವರ್ನರ್ ಭಾಷಣ ರದ್ದುಪಡಿಸಿದ ಸಭಾಧ್ಯಕ್ಷರು!

ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಬಜೆಟ್ ಅಧಿವೇಶನದ ಭಾಷಣವನ್ನು ರದ್ದುಪಡಿಸಿ ವಿಧಾನಸಭಾಧ್ಯಕ್ಷ ವಿ ಶಿವಕೊಝುಂತು ಅಧಿವೇಶನವನ್ನು ಮಧ್ಯಾಹ್ನ 12.05ರವರೆಗೆ ಮುಂದೂಡಿದ ಪ್ರಸಂಗ ಸೋಮವಾರ ಪುದುಚೆರಿ ವಿಧಾನಸಭೆಯಲ್ಲಿ ನಡೆಯಿತು.
ಪುದುಚೆರಿ ಲೆ.ಗವರ್ನರ್ ಕಿರಣ್ ಬೇಡಿ
ಪುದುಚೆರಿ ಲೆ.ಗವರ್ನರ್ ಕಿರಣ್ ಬೇಡಿ
Updated on

ಪುದುಚೆರಿ: ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಬಜೆಟ್ ಅಧಿವೇಶನದ ಭಾಷಣವನ್ನು ರದ್ದುಪಡಿಸಿ ವಿಧಾನಸಭಾಧ್ಯಕ್ಷ ವಿ ಶಿವಕೊಝುಂತು ಅಧಿವೇಶನವನ್ನು ಮಧ್ಯಾಹ್ನ 12.05ರವರೆಗೆ ಮುಂದೂಡಿದ ಪ್ರಸಂಗ ಸೋಮವಾರ ಪುದುಚೆರಿ ವಿಧಾನಸಭೆಯಲ್ಲಿ ನಡೆಯಿತು.

ಲೆಫ್ಟಿನೆಂಟ್ ಗವರ್ನರ್ ಸದನಕ್ಕೆ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ಭಾಷಣ ಮಾಡಲು ಬಾರದಿದ್ದ ಕಾರಣ ಸದನದ ಕಲಾಪದ ಸೆಕ್ಷನ್ 309ರಡಿ ಗವರ್ನರ್ ಅವರ ಭಾಷಣವನ್ನು ರದ್ದುಪಡಿಸಿರುವುದಾಗಿ ಸ್ಪೀಕರ್ ತಿಳಿಸಿದರು.

ಇಂದು ಬೆಳಗ್ಗೆ ಪುದುಚೆರಿ ವಿಧಾನಸಭೆಯ ಅಧಿವೇಶನ ಆರಂಭಗೊಂಡಾಗ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ ಲಕ್ಷ್ಮೀನಾರಾಯಣನ್ ಅವರು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಭಾಷಣ ಮಾಡಲು ಆಗಮಿಸದಿದ್ದ ಕಾರಣ ರಾಜ್ಯಪಾಲರ ಭಾಷಣವನ್ನು ಸೆಕ್ಷನ್ 309ರಡಿ ರದ್ದುಪಡಿಸುವಂತೆ ಅಂಗೀಕಾರ ಕೋರಿದರು.

ಆಗ ಸ್ಪೀಕರ್ ಅವರು ಸದನದಲ್ಲಿ ನಿರ್ಣಯವನ್ನು ಮತಕ್ಕೆ ಹಾಕಿದರು. ಆಗ ಎಡಿಎಂಕೆ ಮತ್ತು ಬಿಜೆಪಿ ಸದಸ್ಯರ ವಿರೋಧದ ಮಧ್ಯೆ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಇದು ಕಾನೂನಾತ್ಮಕವಲ್ಲ ಎಂದು ಬಿಜೆಪಿ ಆರೋಪಿಸಿದರೆ ಎಡಿಎಂಕೆ ಸದಸ್ಯರು ಕೊರೋನಾ ವೈರಸ್ ಬಗ್ಗೆ ಮಾತ್ರ ಚರ್ಚೆಯಾಗಬೇಕೆಂದು ಬೇಡಿಕೆಯಿಟ್ಟರು. ವಿಧಾನಸಭೆಯ ಪ್ರಮುಖ ವಿರೋಧ ಪಕ್ಷವಾದ ಎಐಎನ್ಆರ್ ಸಿ ಸದಸ್ಯರು ಸದನದಲ್ಲಿ ಈ ವೇಳೆ ಹಾಜರಿರಲಿಲ್ಲ.

ಕಳೆದ ಜುಲೈ 17ರಂದು ಗೃಹ ವ್ಯವಹಾರಗಳ ಸಚಿವಾಲಯ ಬಜೆಟ್ ಗೆ ಅನುಮೋದನೆ ನೀಡಿದ್ದು ಅದಕ್ಕೆ ಅಂಗೀಕಾರ ಹಾಕುವುದು ಲೆಫ್ಟಿನೆಂಟ್ ಗವರ್ನರ್ ಕರ್ತವ್ಯವಾಗಿದೆ. ಇಂದು ಮಧ್ಯಾಹ್ನ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಿ ಬೆಳಗ್ಗೆ 9.45ಕ್ಕೆ ಸದನವನ್ನು ಸಭಾಧ್ಯಕ್ಷರು ಮುಂದೂಡಿದರು.

ಮುಖ್ಯಮಂತ್ರಿ ವಿ ನಾರಾಯಣಸಾಮಿ ತಮಗೆ ವಾರ್ಷಿಕ ಹಣಕಾಸು ವರದಿ ಕಳುಹಿಸಲಿಲ್ಲ ಎಂದು ಹೇಳಿ ನಿನ್ನೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ವಿಧಾನಸಭೆಯಲ್ಲಿ ತಮ್ಮ ಭಾಷಣ ಮತ್ತು 2020-21ನೇ ಸಾಲಿನ ಬಜೆಟ್ ಅಧಿವೇಶನ ಮಂಡನೆಗೆ ಹೊಸ ದಿನಾಂಕ ಸೂಚಿಸಲು ನಿರ್ಧರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com