ಕಠಿಣ ಕಾನೂನು ಜಾರಿಯಾದ ನಂತರ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಶೇ.82 ರಷ್ಟು ಕುಸಿತ: ಮುಖ್ತಾರ್ ಅಬ್ಬಾಸ್ ನಖ್ವಿ

ಸಾಮಾಜಿಕ ಅನಿಷ್ಟದ ವಿರುದ್ಧದ ಕಾನೂನು ಜಾರಿಯಾದಂದಿನಿಂದ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಶೇಕಡಾ 82 ರಷ್ಟು ಕುಸಿತ ಕಂಡುಬಂದಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಹೇಳಿದ್ದಾರೆ. ಇದೇ ವೇಳೆ ಆಗಸ್ಟ್  1 ತ್ರಿವಳಿ ತಲಾಖ್ ನಿಷೇಧದ ಕಾನೂನು ಜಾರಿಯಾದ ದಿನವಾಗಿದ್ದು ಇದನ್ನು "ಮುಸ್ಲಿಂ ಮಹಿಳಾ ಹಕ್ಕುಗಳ ದಿನ ". ಎಂದು ಕರೆದಿದ
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ: ಸಾಮಾಜಿಕ ಅನಿಷ್ಟದ ವಿರುದ್ಧದ ಕಾನೂನು ಜಾರಿಯಾದಂದಿನಿಂದ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಶೇಕಡಾ 82 ರಷ್ಟು ಕುಸಿತ ಕಂಡುಬಂದಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಹೇಳಿದ್ದಾರೆ. ಇದೇ ವೇಳೆ ಆಗಸ್ಟ್  1 ತ್ರಿವಳಿ ತಲಾಖ್ ನಿಷೇಧದ ಕಾನೂನು ಜಾರಿಯಾದ ದಿನವಾಗಿದ್ದು ಇದನ್ನು "ಮುಸ್ಲಿಂ ಮಹಿಳಾ ಹಕ್ಕುಗಳ ದಿನ ". ಎಂದು ಕರೆದಿದ್ದಾರೆ.

ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019, ಮಹಿಳೆಯರ ಹಕ್ಕುಗಳ ಸಂರಕ್ಷಣೆಗೆ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಪ್ರಕಟಿಸಿದ  'Triple Talaq -- Big Reform, Better Result'  ಎಂಬ ಲೇಖನದಲ್ಲಿ ತ್ರಿವಳಿ ತಲಾಖ್ ಅಥವಾ ತಲಾಖ್-ಎ-ಬಿಡ್ಡತ್ ಇಸ್ಲಾಮಿಕ್  ಕಾನೂನುಬದ್ದವಲ್ಲ. ಆದರೆ  ಸಾಮಾಜಿಕ ಅನಿಷ್ಟಕ್ಕೆ  ಇನ್ನೂ ಮತದ ರಾಜಕಾರಣದಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದಿದ್ದಾರೆ. . "ಆಗಸ್ಟ್ 1, 2019, ಭಾರತೀಯ ಸಂಸದೀಯ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದ್ದು, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಸೇರಿದಂತೆ 'ಜಾತ್ಯತೀತತೆಯ ಚಾಂಪಿಯನ್ನರೆಂದು ' ಎಂದು ಕರೆಯಲ್ಪಡುವ ಪಕ್ಷಗಳ ವಿರೋಧದ ನಡುವೆಯೂ ತ್ರಿವಳಿ ತಲಾಖ್ ವಿರುದ್ಧದ ಮಸೂದೆಯನ್ನು ಕಾನೂನಾಗಿ ಮಾಡಲಾಗಿದೆ. " ನಖ್ವಿ ಹೇಳಿದ್ದಾರೆ.

ಆಗಸ್ಟ್ 1 ಲಿಂಗ ಸಮಾನತೆಯನ್ನು ಖಾತರಿಪಡಿಸುವ ಮತ್ತು ಮುಸ್ಲಿಂ ಮಹಿಳೆಯರ ಸಾಂವಿಧಾನಿಕ, ಮೂಲಭೂತ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಬಲಪಡಿಸುವ ದಿನವಾಗಿದೆ.  ಇದನ್ನು 'ಮುಸ್ಲಿಂ ಮಹಿಳಾ ಹಕ್ಕುಗಳ ದಿನ' ಎಂದು ಕರೆಯಬಹುದು.  ಆ ದಿನವು ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿ "ಸುವರ್ಣ ಕ್ಷಣ" ವಾಗಿ ಉಳಿಯಲಿದೆ ಎಂದು ಸಚಿವರು ಲೇಖನದಲ್ಲಿ ತಿಳಿಸಿದ್ದಾರೆ.

"ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೆ ಬಂದು ಒಂದು ವರ್ಷ ಕಳೆದಿದೆ ಮತ್ತು ಅದರ ನಂತರ ತ್ರಿವಳಿ  ತಲಾಖ್ ಪ್ರಕರಣಗಳಲ್ಲಿ ಶೇಕಡಾ 82 ರಷ್ಟು ಕುಸಿತ ಕಂಡುಬಂದಿದೆ"  ಅಂಕಿಅಂಶಗಳನ್ನು ಉಲ್ಲೇಖಿಸದೆ ನಖ್ವಿ ಹೇಳಿದ್ದಾರೆ. ತ್ರಿವಳಿ ತಲಾಖ್‌ನ "ಸಾಮಾಜಿಕ ಅನಿಷ್ಟದ"ವಿರುದ್ಧದ ಕಾನೂನನ್ನು 1986 ರಲ್ಲಿ ಸುಪ್ರೀಂ ಕೋರ್ಟ್ ಶಾ ಬಾನೊ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದಾಗ ಅಂಗೀಕರಿಸಬಹುದಿತ್ತು ಎಂದು ಅವರು ಹೇಳಿದರು. 545 ಲೋಕಸಭಾ ಸದಸ್ಯರಲ್ಲಿ 400 ಕ್ಕಿಂತ ಹೆಚ್ಚು ಮತ್ತು ರಾಜ್ಯಸಭೆಯ 245 ಸದಸ್ಯರಲ್ಲಿ 159 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತವನ್ನು ಹೊಂದಿತ್ತು.  ಆದರೆ ಅಂದಿನ ರಾಜೀವ್ ಗಾಂಧಿ ಸರ್ಕಾರವು ಸಂಸತ್ತಿನಲ್ಲಿ ತನ್ನ ಶಕ್ತಿಯನ್ನು ಬಳಸಿಕೊಂಡು ತೀರ್ಪನ್ನು ನಿಷ್ಪರಿಣಾಮಕಾರಿಯನ್ನಾಗಿಸಿದೆ.  ಅಲ್ಲದೆ ಮುಸ್ಲಿಂ ಮಹಿಳೆಯರಿಗೆ ಅವರ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿಸಿತ್ತು, 

 "ಆಗಿನ ಕಾಂಗ್ರೆಸ್ ಸರ್ಕಾರವು ಕೆಲವು 'ಸಂಕುಚಿತ ಮನಸ್ಸಿನ ಮತಾಂಧರ' ತರ್ಕಬದ್ಧವಲ್ಲದವರ ವಾದಕ್ಕೆ ತಲೆಬಾಗಿ" ಮುಸ್ಲಿಂ ಮಹಿಳೆಯರಸಾಂವಿಧಾನಿಕ ಹಕ್ಕುಗಳನ್ನು ಕಸಿಯಿತು ಇದು ಕ್ರಿಮಿನಲ್ ಅಪರಾಧವಾಗಿದೆ"  ನಖ್ವಿ ಹೇಳಿದರು. ಕಾಂಗ್ರೆಸ್ ನ ಆ ಕ್ಷಣದ ತಪ್ಪು " ಮುಸ್ಲಿಂ ಮಹಿಳೆಯರಿಗೆ "ದಶಕಗಳ ಶಿಕ್ಷೆಯಾಗಿದೆ" ಎಂದು ಅವರು ಹೇಳಿದರು. "ವೋಟ್ ಕಾ ಉಧಾರ್" (ಮತಗಳ ಸಾಲ) ಗಾಗಿ ಕಾಂಗ್ರೆಸ್ ಚಿಂತಿತರಾಗಿತ್ತು, ಆದರೆ ನಮ್ಮ ಸರ್ಕಾರವು 'ಸಮಾಜಿಕ್ ಸುಧಾರ್' (ಸಾಮಾಜಿಕ ಸುಧಾರಣೆ) ಗಾಗಿ ಚಿಂತಿತವಾಗಿದೆ "ಎಂದು ನಖ್ವಿ ಹೇಳಿದರು, ಭಾರತವು ಸಂವಿಧಾನದ ಮೇಲೆ ನಡೆಯುತ್ತದೆ, ಶರಿಯತ್ ಅಥವಾ ಇತರ ಯಾವುದೇ ಧಾರ್ಮಿಕ ಪಠ್ಯಪುಸ್ತಕದ ಮೇಲೆ ಅಲ್ಲ  ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ಸತಿ ಮತ್ತು ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಈ ಹಿಂದೆ ದೇಶದಲ್ಲಿ ವಿವಿಧ ಶಾಸನಗಳನ್ನು ತರಲಾಗಿತ್ತು ಎಂದು ಉಲ್ಲೇಖಿಸಿದ್ದ ನಖ್ವಿ ತ್ರಿವಳಿ ತಲಾಖ್ ವಿರುದ್ಧದ ಕಾನೂನಿಗೆ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು "ಅಮಾನವೀಯ, ಕ್ರೂರತ್ವ"ವನ್ನು ಅಂತ್ಯಗೊಳಿಸುವ ಮೂಲಕ ಲಿಂಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಜಾರಿಮಾಡಲಾಗಿದೆ.  ವಿಶ್ವದ ಹಲವಾರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳುತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರ  ಎಂದಿವೆ. ಈಜಿಪ್ಟ್, ಪಾಕಿಸ್ತಾನ, ಬಾಂಗ್ಲಾದೇಶ, ಸಿರಿಯಾ ಮತ್ತು ಮಲೇಷ್ಯಾ ದಲ್ಲಿ ಇದು ಕಾನೂನುಬಾಹಿರವಾಗಿದೆ.  "ಆದಾಗ್ಯೂ, ಈ ಅಮಾನವೀಯ ಮತ್ತು ಕ್ರೂರ ಅಭ್ಯಾಸವನ್ನು ತೊಡೆದುಹಾಕಲು ಭಾರತಕ್ಕೆ 70 ವರ್ಷಗಳು ಬೇಕಾಯಿತು" ಎಂದು ನಖ್ವಿ ಹೇಳಿದರು.

ಆಗಸ್ಟ್ ತಿಂಗಳು ಭಾರತೀಯ ಇತಿಹಾಸದಲ್ಲಿ ಕ್ರಾಂತಿ, ಹಕ್ಕುಗಳು ಮತ್ತು ಸುಧಾರಣೆಗಳಲ್ಲಿ ಒಂದಾಗಿದೆ ಎಂದು ಸಚಿವರು ಹೇಳಿದರು - ಆಗಸ್ಟ್ 8, ಕ್ವಿಟ್ ಇಂಡಿಯಾ ಚಳುವಳಿ; ಆಗಸ್ಟ್ 15, ಸ್ವಾತಂತ್ರ್ಯ ದಿನ; ಆಗಸ್ಟ್ 19, ವಿಶ್ವ ಮಾನವೀಯ ದಿನ; ಆಗಸ್ಟ್ 20, ಸದ್ಭಾವನಾ ದಿವಸ್ಮತ್ತು ಆಗಸ್ಟ್ 5, 370 ನೇ ವಿಧಿಯನ್ನು ರದ್ದುಪಡಿಸಿದ ದಿನವಾಗಿದೆ ಎಂದು ಸಚಿವರು ಸ್ಮರಿಸಿದ್ದಾರೆ.

ತ್ರಿವಳಿ ತಲಾಖ್ ವಿರುದ್ಧದ ಕಾನೂನನ್ನು ನರೇಂದ್ರ ಮೋದಿ ಸರ್ಕಾರ 2017 ರ ಮೇ 18 ರ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೆ ತರಲು ಮಾಡಿದೆ. ತ್ರಿವಳಿ ತಲಾಖ್ ಕಾನೂನನ್ನು ಜಾರಿಗೆ ತರುವ ಮೂಲಕ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಸಾಮಾಜಿಕ-ಆರ್ಥಿಕ, ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಬಲಪಡಿಸಿದೆ. ಸಾಮಾಜಿಕ ಸುಧಾರಣೆಗಳು ಮತ್ತು ಎಲ್ಲಾ ವರ್ಗಗಳ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ನಖ್ವಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com