ವರ್ಕ್ ಫ್ರಮ್ ಹೋಮ್ (ಸಂಗ್ರಹ ಚಿತ್ರ)
ವರ್ಕ್ ಫ್ರಮ್ ಹೋಮ್ (ಸಂಗ್ರಹ ಚಿತ್ರ)

ಐಟಿ ಕ್ಷೇತ್ರಕ್ಕೆ ಡಿಸೆಂಬರ್ 31 ವರೆಗೆ ವರ್ಕ್ ಫ್ರಮ್ ಹೋಮ್ ವಿಸ್ತರಣೆ: ಕೇಂದ್ರ ಸರ್ಕಾರ

ಕೋವಿಡ್-19 ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದಲ್ಲಿರುವವರಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಡಿ.31 ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದಲ್ಲಿರುವವರಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಡಿ.31 ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ವರೆಗೂ ಜು.31 ವರೆಗೆ ಐಟಿ ಹಾಗೂ ಬಿಪಿಒ ಸಂಸ್ಥೆಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನ್ನು ನಿಗದಿಪಡಿಸಲಾಗಿತ್ತು.

ಡಿ.31, 2020 ವರೆಗೆ ವರ್ಕ್ ಫ್ರಮ್ ಹೋಮ್ ನ್ನು ಸಾಧ್ಯವಾಗಿಸಲು ಟೆಲಿಕಾಂ ಇಲಾಖೆ ಸೇವಾ ಪೂರೈಕೆದಾರರಿಗೆ ಷರತ್ತು ಮತ್ತು ನಿಬಂಧನೆಗಳ ಸಡಿಲಿಕೆಯನ್ನು ವಿಸ್ತರಿಸಿದೆ ಎಂದು ಟ್ವೀಟ್ ಮೂಲಕ ಸ್ವತಃ ಇಲಾಖೆ ಸ್ಪಷ್ಟಪಡಿಸಿದೆ.

ಪ್ರಸ್ತುತ ಐಟಿಯ ಶೇ.85 ರಷ್ಟು ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖವಾದ ಕೆಲಸಗಳಲ್ಲಿ ತೊಡಗಿರುವವರು ಮಾತ್ರವೇ ಕಚೇರಿಗಳಿಗೆ ತೆರಳುತ್ತಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com