
ನವದೆಹಲಿ: ಕೋವಿಡ್ -19 ಔಷಧ ಫವಿಪಿರಾವೀರ್‌ನ ಮೂರನೇ ಹಂತದ ಪ್ರಯೋಗದಲ್ಲಿ 150 ರೋಗಿಗಳು ಉಪಯೋಗಿಸಿದ್ದು,
ಶೇ, 40 ರಷ್ಟು ವೇಗದ ಗುಣವಾಗಿರುವುದು ಕಂಡುಬಂದಿದೆ ಎಂದು ಜಾಗತಿಕ ಔಷಧ ಸಂಶೋಧನಾ ಸಂಸ್ಥೆ
ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ.
ಬಹು ಕೇಂದ್ರಿತ ಕ್ಲಿನಿಕಲ್ ಪ್ರಯೋಗದಲ್ಲಿ ಫವಿಪಿರಾವೀರ್ ದಕ್ಷತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸಲಾಗಿದ್ದು, ಅಲ್ಪ ಹಾಗೂ ಮಧ್ಯಮ ಕೋವಿಡ್-19 ರೋಗಿಗಳಿಗೆ ಮಾತ್ರೆಗಳನ್ನು ನೀಡಿ ಯಾದೃಚ್ಚಿಕ ರೀತಿಯಲ್ಲಿ ಪರೀಕ್ಷೆ ನಡೆಸಲಾಗಿದೆ.
ಗುಣಮಟ್ಟದ ಆರೈಕೆಯ ಬೆಂಬಲದೊಂದಿಗೆ ಮೊದಲ ದಿನ 3600 ಎಂಜಿ, ಎರಡನೇ ಹಾಗೂ ನಂತರದ ದಿನಗಳಲ್ಲಿ 14ದಿನಗಳವರೆಗೂ 1600 ಎಂಜಿ ಫವಿಪಿರಾವೀರ್ ಮಾತ್ರೆಗಳನ್ನು ಪಡೆದ ರೋಗಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಂಕಿನ ತೀವ್ರತೆಯ ಆಧಾರದ ಮೇಲೆ ಅಲ್ಪ ಸೋಂಕಿತ 90 ರೋಗಿಗಳು, ಮಧ್ಯಮ ಸೋಂಕಿತ 60 ರೋಗಿಗಳಿಗೆ ಮಾತ್ರೆ ನೀಡಲಾಗಿದ್ದು, ಅವರೆಲ್ಲೂ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಯೋಗ ಪರೀಕ್ಷೆಯಲ್ಲಿ ಶೇ. 40 ರಷ್ಟು ವೇಗದ ಗುಣವಾಗಿದ್ದು, ದೇಶದ ಉಷ್ಣಾಂಶ, ಆಮ್ಲಜನಕದ ಶುದ್ಧತ್ವ, ಉಸಿರಾಟದ ಪ್ರಮಾಣ
ಮತ್ತು ಕೆಮ್ಮಿನ ಪ್ರಮಾಣ ಮೂರು ದಿನಗಳಲ್ಲಿ ಕಡಿಮೆಯಾಗಿದೆ. ಇದಲ್ಲದೇ ಶೇ. 69.8 ರಷ್ಟು ರೋಗಿಗಳು ನಾಲ್ಕು ದಿನಗಳೊಳಗೆ
ಗುಣವಾಗಿದ್ದಾರೆ. ಫವಿಪಿರಾವೀರ್ ಔಷಧದಿಂದ ಶೇ.28.6 ರಷ್ಟು ವೇಗವಾಗಿ ಸೋಂಕಿನಿಂದ ಗುಣಮುಖರಾಗಿರುವುದಾಗಿ ಕಂಡುಬಂದಿದೆ.
ಫವಿಪಿರಾವೀರ್ ಔಷಧ ಅಧ್ಯಯನದಿಂದ ಉತ್ತೇಜಿತರಾಗಿದ್ದು, ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲಾಗಿದೆ.
ಆದರೂ ವೈಜ್ಞಾನಿಕ ಸಿದ್ಧಾಂತಗಳನ್ನು ಬಿಟ್ಟುಕೊಡಲಾಗದು ಎಂದು ಪ್ರಧಾನ ಸಂಶೋಧಕ ಡಾ. ಜರೀರ್ ಉಡ್ವಾಡಿಯಾ ತಿಳಿಸಿದ್ದಾರೆ.
Advertisement