ಭಾರತದಲ್ಲಿ ಕೋವಿಡ್ ಲಸಿಕೆ 'ಕೋವಾಕ್ಸಿನ್' ಮಾನವ ಪ್ರಯೋಗ ಆರಂಭ: 30 ವರ್ಷದ ಯುವಕನಿಗೆ ಮೊದಲ ಔಷಧ ನೀಡಿಕೆ!

ಕೋವಿಡ್-19 ನಿಯಂತ್ರಣದ ಪ್ರಯತ್ನವಾಗಿ ಸ್ವದೇಶಿ ನಿರ್ಮಿತ 'ಕೋವಾಕ್ಸಿನ್ ' ಔಷಧಿಯನ್ನು 30 ವರ್ಷದ ಯುವಕನೋರ್ವನಿಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ) ಇಂದು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೋವಿಡ್-19 ನಿಯಂತ್ರಣದ ಪ್ರಯತ್ನವಾಗಿ ಸ್ವದೇಶಿ ನಿರ್ಮಿತ 'ಕೋವಾಕ್ಸಿನ್ ' ಔಷಧಿಯನ್ನು 30 ವರ್ಷದ
ಯುವಕನೋರ್ವನಿಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ) ಇಂದು ನೀಡಿದೆ.

ಹೈದ್ರಾಬಾದ್ ಮೂಲದ ಭಾರತ್ ಬಯೋ ಟೆಕ್ ಔಷಧ ಕಂಪನಿ ಸಿದ್ಧಪಡಿಸಿರುವ 'ಕೋವಾಕ್ಸಿನ್' ಮಾನವ ಪ್ರಯೋಗಕ್ಕೆ ಏಮ್ಸ್ ನ ನೈತಿಕ ಕಮಿಟಿ ಅನುಮೋದನೆ ನೀಡಿದ ಬಳಿಕ ಇದು ಮಾನವ ಪ್ರಯೋಗದ ಮೊದಲ ಹಂತವಾಗಿದೆ. 

ದೆಹಲಿಯ ನಿವಾಸಿಯೊಬ್ಬರಿಗೆ ಇಂದು ಕೋವಾಕ್ಸಿನ್ ಔಷಧಿಯನ್ನು ನೀಡಲಾಗಿದೆ ಎಂದು ಅಧ್ಯಯನದ ತನಿಖಾಧಿಕಾರಿ ಹಾಗೂ ಕಮ್ಯೂನಿಟಿ ಮೆಡಿಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿರುವ ಪ್ರೊಫೆಸರ್ ಡಾ. ಸಂಜಯ್ ರೈ ತಿಳಿಸಿದ್ದಾರೆ.

ದೆಹಲಿಯ 30 ವರ್ಷದ ಯುವಕನಿಗೆ ಕೋವಾಕ್ಸಿನ್ ಔಷಧಿಯನ್ನು ಮೊದಲಿಗೆ ನೀಡಲಾಗಿದೆ.ಎರಡು ದಿನಗಳ ಹಿಂದೆ ಆತನನ್ನು 
ತಪಾಸಣೆ ಮಾಡಲಾಗಿತ್ತು.ಆರೋಗ್ಯದ ಪ್ರಮುಖ ನಿಯತಾಂಕಗಳು ಸಾಮಾನ್ಯವಾಗಿದ್ದವು.ಆತನಿಗೆ ಯಾವುದೇ ರೀತಿಯ
ಅಸ್ವಸ್ಥತತೆ ಕಂಡುಬರಲಿಲ್ಲ ಎಂದು ಡಾ. ರೈ  ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಲಸಿಕೆ ಪ್ರಯೋಗದ ನಂತರ ಎರಡು ಗಂಟೆಗಳ ಕಾಲ ವೀಕ್ಷಣೆ ಮಾಡಲಾಯಿತು.ತಕ್ಷಣ ಯಾವುದೇ ಅಡ್ಡ ಪರಿಣಾಮ ಕಂಡುಬರಲಿಲ್ಲ. 
ಒಂದು ವಾರಗಳ ಕಾಲ ಈ ಬಗ್ಗೆ ನಿಗಾವಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಏಮ್ಸ್ ನಲ್ಲಿ ಮಾನವ ಪ್ರಯೋಗಕ್ಕಾಗಿ 3500ಕ್ಕೂ ಹೆಚ್ಚು ಸ್ವಯಂ ಸೇವಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಪ್ರಸ್ತುತ 22 ವಿಷಯಗಳ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದ್ದು,ಅವರಲ್ಲಿ ಕೇವಲ ಮೂವರಲ್ಲಿ ಮಾತ್ರ  ಆರೋಗ್ಯ ನಿಯಂತಕಾಗಳು ಸಾಮಾನ್ಯವಾಗಿದ್ದವು.ಅವರ ಆರೋಗ್ಯ ತಪಾಸಣೆಯ ವರದಿ ಬಂದ ನಂತರ ನಾಳೆ ಹೆಚ್ಚಿನ ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗುವುದು ಎಂದು ರೈ ತಿಳಿಸಿದ್ದಾರೆ.

ಕೋವಿಡ್ ಲಸಿಕೆ ನೀಡಿದ ನಂತರ ಒಂದು ವಾರದವರೆಗೂ ವೈದ್ಯರು ದೂರವಾಣಿ ಮೂಲಕ ಲಸಿಕೆ ನೀಡಲಾದ ವ್ಯಕ್ತಿಯ ಆರೋಗ್ಯವನ್ನು ಪ್ರತಿದಿನ ತಪಾಸಣೆ ಮಾಡುತ್ತಾರೆ.  ಮೊದಲ ಹಂತದಲ್ಲಿ 12 ಕಡೆಗಳಲ್ಲಿ ಮಾನವ ಪ್ರಯೋಗ ನಡೆಯಲಿದೆ. ಎರಡನೇ ಹಂತದಲ್ಲಿ ಯಾದೃಚ್ಚಿಕವಾಗಿ ಪ್ರಯೋಗ ಮಾಡಲಾಗುವುದು ಎಂದು ಏಮ್ಸ್ ತಿಳಿಸಿದೆ. ದೆಹಲಿಯ ಏಮ್ಸ್ ಹೊರತುಪಡಿಸಿದಂತೆ ಪಾಟ್ನಾ ಏಮ್ಸ್ ಮತ್ತಿತರ ಕಡೆಗಳಲ್ಲಿ ಮಾನವ ಪ್ರಯೋಗ ನಡೆಯುತ್ತಿದೆ. 

ಆರೋಗ್ಯವಾಗಿದ್ದು, ಕೋವಾಕ್ಸಿನ್ ಮಾನವ ಪ್ರಯೋಗಕ್ಕೆ ಒಳಗಾಗಲು ಆಸಕ್ತಿ ಹೊಂದಿರುವವರು ಇ-ಮೇಲ್ ctaiims.covid19@gmail.com ಅಥವಾ ಮೊ.7428847499ಗೆ ಕರೆ ಅಥವಾ ಸಂದೇಶ ಕಳುಹಿಸಬಹುದೆಂದು ಏಮ್ಸ್ ವೈದ್ಯರು 
ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com