ಕೋವಿಡ್ ತಂದಿಟ್ಟ ಸಂಕಷ್ಟ: ಹೊಟ್ಟೆಪಾಡಿಗಾಗಿ ಟೀ ಮಾರುವ ವಕೀಲ!

ದಶಕಗಳ ಕಾಲ ವಕೀಲಿ ವೃತ್ತಿ ಮಾಡಿದ ಸೈಯದ್ ಹರೂನ್ ಎಂಬ ವ್ಯಕ್ತಿಯೊಬ್ಬರು ಲಾಕ್ ಡೌನ್  ಸಂದರ್ಭ ಉದ್ಯೋಗಕಳೆದುಕೊಂಡು ಜೀವನೋಪಾಯಕ್ಕಾಗಿ ಟೀ ಮಾರುವ ಕಾಯಕದಲ್ಲಿ ತೊಡಗಿದ್ದಾರೆ.  ಬೀದಿ ಬೀದಿಗಳಲ್ಲಿ ಸೈಕಲ್ ನಲ್ಲಿ ಬಿಸಿ ಬಿಸಿಯಾದ ಟೀ ಮಾರುವ ಮೂಲಕ ಬದುಕು ಸಾಗಿಸುತ್ತಿದ್ದಾರೆ.
ಟೀ ಮಾರುತ್ತಿರುವ ವಕೀಲ ಸೈಯದ್ ಹರೂನ್
ಟೀ ಮಾರುತ್ತಿರುವ ವಕೀಲ ಸೈಯದ್ ಹರೂನ್

ಈರೋಡ್: ಕೊರೋನಾವೈರಸ್ ಹಲವರ ಬದುಕನ್ನು ಕಿತ್ತುಕೊಂಡಿರುವಂತೆಯೇ, ಹೊಟ್ಟೆಪಾಡಿಗಾಗಿ ಏನನ್ನಾದರೂ ಕೆಲಸ
ಮಾಡುವಂತೆ ಮಾಡಿದೆ.

ದಶಕಗಳ ಕಾಲ ವಕೀಲಿ ವೃತ್ತಿ ಮಾಡಿದ ಸೈಯದ್ ಹರೂನ್ ಎಂಬ ವ್ಯಕ್ತಿಯೊಬ್ಬರು ಲಾಕ್ ಡೌನ್  ಸಂದರ್ಭ ಉದ್ಯೋಗ
ಕಳೆದುಕೊಂಡು ಜೀವನೋಪಾಯಕ್ಕಾಗಿ ಟೀ ಮಾರುವ ಕಾಯಕದಲ್ಲಿ ತೊಡಗಿದ್ದಾರೆ.  ಬೀದಿ ಬೀದಿಗಳಲ್ಲಿ ಸೈಕಲ್ ನಲ್ಲಿ 
ಬಿಸಿ ಬಿಸಿಯಾದ ಟೀ ಮಾರುವ ಮೂಲಕ ಬದುಕು ಸಾಗಿಸುತ್ತಿದ್ದಾರೆ.

62 ವರ್ಷದ ಸೈಯದ್ ಹರೂನ್, ನಾಲ್ಕು ದಶಗಳ ಕಾಲ ವಕೀಲರಾಗಿ ಕೆಲಸ ಮಾಡುತ್ತಿದ್ದು, ಇಲ್ಲಿನ ಜಿಲ್ಲಾ ಮುನ್ಸಿಪ್ ಕೋರ್ಟಿನಲ್ಲಿ
ಕಾನೂನಿನ ಕೆಲಸದ ಮೇರೆಗೆ ಮಾರ್ಚ್ 22 ರಂದು ಚೆನ್ನೈಯಿಂದ ಈರೋಡ್ ಗೆ ಬಂದಿದ್ದಾರೆ. ಮಾರ್ಚ್ 24 ರಂದು ಕೇಸ್ ವಿಚಾರಣೆ
ನಿಗದಿಪಡಿಸಲಾಗಿತ್ತು.ಆದರೆ, ಅಂದಿನಿಂದಲೇ ಲಾಕ್ ಡೌನ್ ಜಾರಿಯಾದ್ದರಿಂದ ಚೆನ್ನೈಗೆ ವಾಪಸ್ ತೆರಳಲು ಸಾಧ್ಯವಾಗದೆ 
ಟೀ ಮಾರಾಟವನ್ನು ಆರಂಭಿಸಿದ್ದಾರೆ.

ಈರೋಡ್ ನ ತಿರುನಗರ ಕಾಲೋನಿ ನಿವಾಸಿಯಾಗಿರುವ ಹರೂನ್, ಮದಾರ್ಸ್ ಹೈಕೋರ್ಟಿನಲ್ಲಿ 2000ದಿಂದಲೂ  ವಕೀಲರಾಗಿ  ಅಭ್ಯಾಸ ಮಾಡುತ್ತಿದ್ದು, ಮಾರ್ಚ್ 22ರಂದು ಚೆನ್ನೈನಿಂದ ಈರೋಡ್ ಬಂದಿದ್ದಾರೆ.ನಂತರ ಲಾಕ್ ಡೌನ್  ಜಾರಿ ಮಾಡಿದ್ದರಿಂದ ಕೋರ್ಟ್  ಬಂದ್ ಆಗಿದೆ. ಚೆನ್ನೈಗೆ ಹೋಗಲು ಸಾಧ್ಯವಾಗದೆ ನಾಲ್ಕು ತಿಂಗಳ ಕಾಲ ಉದ್ಯೋಗ ಇಲ್ಲದಂತಾಯಿತು. ಆದ್ದರಿಂದ ಟೀ ಮಾರುವ ಕೆಲಸ ಆರಂಭಿಸಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸೈಯದ್ ಹರೂನ್ 1996 ಮತ್ತು 1998ರ ನಡುವೆ ಸುಪ್ರೀಂಕೋರ್ಟಿನಲ್ಲಿಯೂ ಕೆಲ ದಿನಗಳ ಕಾಲ ಕೆಲಸ ಮಾಡಿದ್ದಾರೆ.  ಪ್ರತಿಯೊಬ್ಬರು ಟೀ ಮೆಚ್ಚಿಕೊಂಡಿದ್ದು, ಈ ವ್ಯವಹಾರದಲ್ಲಿ ಹೆಚ್ಚಿನ ಪ್ರಮಾಣದ ನಷ್ಟವಾಗುತ್ತಿಲ್ಲ. ಪ್ರತಿದಿನ ಕನಿಷ್ಠ 500 ರೂ. ಸಂಪಾದಿಸುತ್ತೇನೆ. ಕೆಲವಿಲ್ಲದೆ ಅನೇಕ ವಕೀಲರು ಸಂಕಷ್ಟದಲ್ಲಿರುವಾಗ ಇದನ್ನು ಪರ್ಯಾಯ ಉದ್ಯೋಗವನ್ನಾಗಿ ಆರಂಭಿಸಬಹುದು ಎಂದು ಅವರು ಹೇಳಿದ್ದಾರೆ.

ವಕೀಲಿ ವೃತ್ತಿ ಮೇಲೆ ನಿಷ್ಠೆ ಹೊಂದಿರುವ ಸೈಯದ್ ಹರೂನ್, ವಕೀಲರಿಗೆ 10 ಸಾವಿರ ಆರ್ಥಿಕ ನೆರವು ನೀಡಬೇಕು, ತಮ್ಮಂತಹ 
ವಕೀಲರಿಗೆ ಸರ್ಕಾರ 1 ಲಕ್ಷ ರೂಪಾಯಿ ನೀಡಬೇಕೆಂಬ ಬೇಡಿಕೆಯಿರುವ ಭಿತ್ತಿಪತ್ರವೊಂದನ್ನು ಟೀ ಮಾರುವ ಸೈಕಲ್ ಮೇಲೆ 
ಹಾಕಿಕೊಂಡಿದ್ದು, ಎಲ್ಲೆಡೆ ಸಂದೇಶ ಸಾರುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com