ನನ್ನ ರಾಜಕೀಯ ಜೀವನ ನಾಶವಾದರೂ ಸರಿಯೇ, ಲಡಾಖ್ ನಲ್ಲಿ ಚೀನಾ ಅತಿಕ್ರಮಣದ ಬಗ್ಗೆ ಸುಳ್ಳು ಹೇಳುವುದಿಲ್ಲ: ರಾಹುಲ್ ಗಾಂಧಿ
ನವದೆಹಲಿ: ನನ್ನ ರಾಜಕೀಯ ಜೀವನೇ ನಾಶವಾದರೂ ಸರಿಯೇ ನಾನು ಲಡಾಖ್ ನಲ್ಲಿ ಚೀನಾ ಅತಿಕ್ರಮಣದ ಬಗ್ಗೆ ಸುಳ್ಳು ಹೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈಶಾನ್ಯ ಲಡಾಖ್ ನಲ್ಲಿ ಚೀನಾ ಅತಿಕ್ರಮಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಲಾಗುವ ಪ್ರಶ್ನೆಗಳ ಟ್ವೀಟ ವಿಡಿಯೋ ಸರಣಿಯನ್ನು ಮುಂದುವರೆಸಿರುವ ರಾಹುಲ್ ಗಾಂಧಿ
ಪ್ರಧಾನಿಗಳಿಗೆ ರಾಹುಲ್ ಗಾಂಧಿ ಕೇಳಲಾಗುತ್ತಿರುವ ಪ್ರಶ್ನೆಗಳು ದುರ್ಬಲವಾಗಿವೆ ಎಂಬ ಜನರ ಅಭಿಪ್ರಾಯಗಳಿಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, ಚೀನಾದ ಸೇನೆ ಈ ದೇಶದ ಭೂಭಾಗವನ್ನು ಅತಿಕ್ರಮಿಸಿಯೇ ಇಲ್ಲ ಎಂದು ಸುಳ್ಳು ಹೇಳಬೇಕೆಂದರೆ ಅದನ್ನು ನಾನು ಮಾಡುವುದಿಲ್ಲ. ನನ್ನ ರಾಜಕೀಯ ಜೀವನವೇ ನಾಶವಾದರೂ ಸರಿಯೇ ನಾನು ದೇಶದ ಸಮಗ್ರತೆ, ಗಡಿಯ ವಿಷಯಗಳಲ್ಲಿ ಸುಳ್ಳು ಹೇಳುವುದಿಲ್ಲ ಎಂದು ಹೇಳಿದ್ದಾರೆ.
ಈ ಘಟನೆ ನನ್ನನ್ನು ವಿಚಲಿತಗೊಳಿಸಿದೆ, ರಕ್ತ ಕುದಿಯುತ್ತದೆ, ಬೇರೊಂದು ರಾಷ್ಟ್ರದವರು ನಮ್ಮ ದೇಶದ ಭೂಭಾಗಕ್ಕೆ ಬರಲು ಹೇಗೆ ಸಾಧ್ಯ? ಸತ್ಯವನ್ನು ಮರೆಮಾಚುವುದು ದೇಶವಿರೋಧಿ ನಡೆ, ಜನರ ಗಮನಕ್ಕೆ ತರುವುದು ದೇಶಭಕ್ತಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ