
ಅಯೋಧ್ಯೆ: ಉದ್ದೇಶಿತ ಭವ್ಯ ರಾಮ ಮಂದಿರದ ಅಡಿಪಾಯದಲ್ಲಿ, ರಾಮ ಜನ್ಮಭೂಮಿ ಚಳುವಳಿಯ ಇತಿಹಾಸವನ್ನು ನೆನಪಿಸುವ ಕ್ಯಾಪ್ಸೂಲ್‌ಗಳನ್ನು ಅಳವಡಿಸುವ ವರದಿಗಳನ್ನು ಟ್ರಸ್ಟ್ ಕೇವಲ ವದಂತಿ ಎಂದು ಅಲ್ಲಗಳೆದಿದೆ.
ಇದೇ ಆಗಸ್ಟ್ 5ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದು, ಈ ಮಧ್ಯೆ ದೇವಸ್ಥಾನ ಕಟ್ಟಡದ ಕೆಳಭಾಗದಲ್ಲಿ ರಾಮ ಮಂದಿರಕ್ಕಾಗಿ ನಡೆದ ರಾಮ ಜನ್ಮಭೂಮಿ ಚಳುವಳಿಯ ಇತಿಹಾಸದ ಮಾಹಿತಿಯನ್ನೊಳಗೊಂಡ ಕ್ಯಾಪ್ಸೂಲ್‌ಗಳನ್ನು ಇಡಲು ನಿರ್ಧರಿಸಲಾಗಿದೆ ಎಂಬ ವರದಿ ಸುಳ್ಳು ಎಂದು ರಾಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷ ಚಂಪತ್ ರಾಯ್ ಸ್ಪಷ್ಟ ಪಡಿಸಿದ್ದಾರೆ.
ಮಂದಿರದ ಮೇಲ್ಮೈಯಿಂದ 200 ಅಡಿ ಕೆಳಗೆ ರಾಮ ಜನ್ಮಭೂಮಿಗಾಗಿ ನಡೆದ ಸುದೀರ್ಘ ಚಳುವಳಿಯ ಇತಿಹಾಸನ್ನು ನೆನಪಿಸುವ ಕ್ಯಾಪ್ಸೂಲ್‌ಗಳನ್ನು ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ರಾಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲ್ ಹೇಳಿದ್ದರು.
Advertisement