ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ನೆರವಿಗೆ ನಿಂತ ಬಿಜೆಪಿ ಸಂಸದ ಗೌತಮ್ ಗಂಭೀರ್!

ಸಮಾಜಮುಖಿ ಕಾರ್ಯಗಳನ್ನು ನಿರಂತರಾಗಿ ನಡೆಸುತ್ತಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಇದೀಗ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಆರ್ಥಿಕ ನೆರವಿಗೆ ನಿಂತಿದ್ದಾರೆ. 
ಗಂಭೀರ್
ಗಂಭೀರ್

ನವದೆಹಲಿ: ಸಮಾಜಮುಖಿ ಕಾರ್ಯಗಳನ್ನು ನಿರಂತರಾಗಿ ನಡೆಸುತ್ತಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಇದೀಗ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಆರ್ಥಿಕ ನೆರವಿಗೆ ನಿಂತಿದ್ದಾರೆ. 

ರಾಷ್ಟ್ರ ರಾಜಧಾನಿಯ ಜಿಬಿ ರಸ್ತೆ ಪ್ರದೇಶದಲ್ಲಿರುವ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಗೌತಮ್ ಗಂಭೀರ್ ಹೊತ್ತಿದ್ದಾರೆ. ಮಕ್ಕಳ ಶಾಲೆ ಶುಲ್ಕಗಳು, ಆರೋಗ್ಯ ಮತ್ತು ಇತರ ವಿವಿಧ ವೆಚ್ಚಗಳಾದ ಆಹಾರ ಮತ್ತು ಔಷಧಿಗಳನ್ನು ಭರಿಸುತ್ತಾರೆ. ಸಂಸದರು ತಮ್ಮ ಈ ಕಾರ್ಯಕ್ಕೆ ಪಿಎಎನ್ಕೆಎಚ್(ರೆಕ್ಕೆಗಳು) ಎಂದು ಕರೆದಿದ್ದಾರೆ. 

"ಸಮಾಜದಲ್ಲಿ ಪ್ರತಿಯೊಬ್ಬರಿಗೂ ಯೋಗ್ಯವಾದ ಜೀವನವನ್ನು ನಡೆಸುವ ಹಕ್ಕಿದೆ ಮತ್ತು ಈ ಮಕ್ಕಳಿಗೆ ಅವರ ಕನಸಿನಂತೆ ಬದುಕಲು ಪೂರಕ ವಾತಾವರಣ ನಿರ್ಮಿಸಬೇಕು ಎಂದು ನಾನು ಬಯಸುತ್ತೇನೆ. ಅವರ ಜೀವನ, ಶಿಕ್ಷಣ ಮತ್ತು ಅವರ ಆರೋಗ್ಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಪೂರ್ವ ದೆಹಲಿಯ ಲೋಕಸಭಾ ಸಂಸದ ಹೇಳಿದರು. ಅದಾಗಲೇ ಗೌತಮ್ ಗಂಭೀರ್ ಫೌಂಡೇಶನ್(ಜಿಜಿಎಫ್) ಈಗಾಗಲೇ ದೇಶ ಸೇವೆಗೆ ಬಲಿದಾನವಾಗಿರುವ  200 ಯೋಧರ ಮಕ್ಕಳನ್ನು ನೋಡಿಕೊಳ್ಳುತ್ತಿದೆ.

ಮೊದಲಿಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹತ್ತು ಹುಡುಗಿಯರನ್ನು ಪ್ರಾಯೋಗಿಕವಾಗಿ ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಇನ್ನೂ ಹದಿನೈದು ಮಕ್ಕಳನ್ನು ದಾಖಲಿಸಲಾಗುವುದು. 

"ನಾವು ಪ್ರಸ್ತುತ ಅಧಿವೇಶನದಲ್ಲಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 10 ಹುಡುಗಿಯರನ್ನು ಆಯ್ಕೆ ಮಾಡಿದ್ದೇವೆ. ಅವರ ಶಾಲಾ ಶುಲ್ಕಗಳು, ಸಮವಸ್ತ್ರ, ಆಹಾರ, ಸಮಾಲೋಚನೆ ಸೇರಿದಂತೆ ವೈದ್ಯಕೀಯ ಸಹಾಯವನ್ನು ನಾವು ಪ್ರಾಯೋಜಿಸುತ್ತೇವೆ ಇದರಿಂದ ಅವರು ತಮ್ಮ ಕನಸುಗಳನ್ನು ಸಾಧಿಸಲು ನೆರವಾಗುತ್ತದೆ ಎಂದು ಗಂಭೀರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com