ಮಾಲ್ ಗಳು
ಮಾಲ್ ಗಳು

ಜೂನ್ 8ರಿಂದ ಧಾರ್ಮಿಕ ಸ್ಥಳ, ಮಾಲ್ ಆರಂಭ: ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ!

ಮಹಾಮಾರಿ ಕೊರೋನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿದ್ದರೂ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ 70 ದಿನಗಳ ನಂತರ ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಮಾಲ್, ರೆಸ್ಟೋರೆಂಟ್ ಗಳು ಆರಂಭಗೊಳ್ಳುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ನವದೆಹಲಿ: ಮಹಾಮಾರಿ ಕೊರೋನಾ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿದ್ದರೂ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ 70 ದಿನಗಳ ನಂತರ ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಮಾಲ್, ರೆಸ್ಟೋರೆಂಟ್ ಗಳು ಆರಂಭಗೊಳ್ಳುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಹೊಸ ಮಾರ್ಗಸೂಚಿ ಪ್ರಕಾರ

* ಭಕ್ತರು ಪ್ರಾರ್ಥನಾ ಮಂದಿರಗಳಲ್ಲಿ ಮೂರ್ತಿಗಳನ್ನು ಮುಟ್ಟುವಂತಿಲ್ಲ.

* ಪ್ರಾರ್ಥನಾ ಮಂದಿರಗಳ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವಿತರಕ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.

* ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶಕ್ಕೆ ಅನುಮತಿ. ರೋಗ ಲಕ್ಷಣ ರಹಿತ ಭಕ್ತರಿಗೆ ಮಾತ್ರ ಪ್ರಾರ್ಥನಾ ಮಂದಿರಕ್ಕೆ ಪ್ರವೇಶ.

* ದೊಡ್ಡ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ. ಗಾಯಕ ಅಥವಾ ಹಾಡುವ ಗುಂಪುಗಳಿಗೆ ಅವಕಾಶವಿಲ್ಲ. 

* ಪರಸ್ಪರ ಹಸ್ತಲಾಘವ, ಶುಭಾಶಯ ಕೋರುವಾಗ ದೈಹಿಕ ಸಂಪರ್ಕ ಬೇಡ. 

* ಭಕ್ತರು ತಮ್ಮದೇ ಪ್ರಾರ್ಥನಾ ಚಾಪೆಗಳನ್ನು ತರಬೇಕು. ಹೋಗುವಾಗ ತೆಗೆದುಕೊಂಡು ಹೋಗಬೇಕು.

* ತೀರ್ಥ ಪ್ರಸಾದಗಳಿಗೆ ನಿರ್ಬಂಧ.

ಮಾಲ್, ರೆಸ್ಟೋರೆಂಟ್ ಗಳಿಗೆ ನಿಯಮಗಳು

* ಮಾಲ್ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವಿತರಕ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.

* ಕೊರೋನಾ ನಿಯಂತ್ರಣದ ಪೋಸ್ಟರ್ ಹಾಗೂ ವಿಡಿಯೋಗಳನ್ನು ಪ್ರದರ್ಶಿಸಬೇಕು.

* ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶಕ್ಕೆ ಅನುಮತಿ. ರೋಗ ಲಕ್ಷಣ ರಹಿತ ಗ್ರಾಹಕರಿಗೆ ಮಾತ್ರ ಮಾಲ್, ರೆಸ್ಟೋರೆಂಟ್ ಪ್ರವೇಶ.

Related Stories

No stories found.

Advertisement

X
Kannada Prabha
www.kannadaprabha.com