ನಿಸರ್ಗ ಚಂಡಮಾರುತ ವೇಳೆ 28 ಸಾವಿರ ಮಂದಿಯನ್ನು ರಕ್ಷಿಸಿ ನಿಜ ಜೀವನದಲ್ಲಿ ಹೀರೋ ಆದ ಸೋನು ಸೂದ್!

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸಿಗರು ತಮ್ಮ ಊರುಗಳಿಗೆ ತೆರಳಲು ಬಸ್ ಮತ್ತು ರೈಲು ವ್ಯವಸ್ಥೆ ಮಾಡಿದ್ದ ನಟ ಸೋನು ಸೂದ್ ಅವರು ನಿಸರ್ಗ ಚಂಡಮಾರುತದಿಂದ ಬರೋಬ್ಬರಿ 28 ಸಾವಿರ ಮಂದಿಯನ್ನು ರಕ್ಷಿಸಿದ್ದಾರೆ.
ಸೋನು ಸೂದ್
ಸೋನು ಸೂದ್

ಮುಂಬೈ: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸಿಗರು ತಮ್ಮ ಊರುಗಳಿಗೆ ತೆರಳಲು ಬಸ್ ಮತ್ತು ರೈಲು ವ್ಯವಸ್ಥೆ ಮಾಡಿದ್ದ ನಟ ಸೋನು ಸೂದ್ ಅವರು ನಿಸರ್ಗ ಚಂಡಮಾರುತದಿಂದ ಬರೋಬ್ಬರಿ 28 ಸಾವಿರ ಮಂದಿಯನ್ನು ರಕ್ಷಿಸಿದ್ದಾರೆ. 

ನಿಸರ್ಗ ಚಂಡಮಾರುತ ಮುಂಬೈ ಕರಾವಳಿ ಪ್ರದೇಶಕ್ಕೆ ಬಡಿದಪ್ಪಳಿಸುವ ಮುನ್ನವೇ ಅಲ್ಲಿದ್ದ ಸುಮಾರು 28 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೋನು ಸೂದ್ ಹಾಗೂ ಅವರ ತಂಡ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು. 

28 ಸಾವಿರ ಮಂದಿಗೆ ವಿವಿಧ ಶಾಲಾ, ಕಾಲೇಜುಗಳಲ್ಲಿ ಪುನರ್ವಸತಿ ಮಾಡಿಕೊಡಲಾಗಿತ್ತು. ಅಲ್ಲೇ ಅವರಿಗೆ ಊಟೋಪಚಾರ ವ್ಯವಸ್ಥೆಯನ್ನು ಮಾಡಿದ್ದರು. ಇದರಿಂದಾಗಿ ಎಲ್ಲರೂ ಸುರಕ್ಷಿತರಾಗಿದ್ದಾರೆ. 

ಇನ್ನು ನಿಸರ್ಗ ಚಂಡಮಾರುತದಿಂದಾಗಿ ಮಹಾರಾಷ್ಟ್ರದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು. ಬಿರುಗಾಳಿ ಮನೆಗೆ ನೂರಾರು ಮನೆಗಳು ಹಾನಿಗೊಳಗಾಗಿವೆ. ಇನ್ನುಸಾವಿರಾರೂ ಮರಗಳು ಧರೆಗುರುಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com