ಮಾಸ್ಕ್ ಧರಿಸಿಲ್ಲವೆಂದು ಮಾನಸಿಕ ಅಸ್ವಸ್ಥ ವ್ಯಕ್ತಿಯ ಕುತ್ತಿಗೆ ಮೇಲೆ ಮಂಡಿಯೂರಿದ ಪೊಲೀಸ್!
ಜೋಧ್ ಪುರ: ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಕಾರಣದಿಂದಾಗಿ ಪೊಲೀಸರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಕುತ್ತಿಗೆ ಮೇಲೆ ಪೊಲೀಸರು ಮಂಡಿಯೂರಿದ ಘಟನೆ ಜೋಧ್ ಪುರದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿದ್ದು, ಈ ಘಟನೆಯನ್ನು ಇತ್ತೀಚೆಗಷ್ಟೇ ಅಮೆರಿಕದಲ್ಲಿ ಜನಾಂಗೀಯ ಹಲ್ಲೆಗೆ ಕುರಿಯಾಗಿ ಮೃತಪಟ್ಟ ಜಾರ್ಜ್ ಪ್ಲಾಯ್ಡ್ ಎಂಬ ವ್ಯಕ್ತಿಯ ಘಟನೆಗೆ ಹೋಲಿಕೆ ಮಾಡಲಾಗುತ್ತಿದೆ.
ಆದರೆ ಜೋಧ್ ಪುರದ ಪ್ರಕರಣದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಮುಖೇಶ್ ಕುಮಾರ್ ಪ್ರಜಾಪತ್ ಎಂಬ ವ್ಯಕ್ತಿ ಮಾಸ್ಕ್ ಧರಿಸದೇ ರಸ್ತೆಗಳಲ್ಲಿ ತಿರುಗುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಆತನ ವಿರುದ್ಧ ಚಲನ್ ನೀಡಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಆ ವ್ಯಕ್ತಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಆ ವ್ಯಕ್ತಿಯನ್ನು ನೆಲಕ್ಕೆ ಉರುಳಿಸಿ ಆತನ ಕುತ್ತಿಗೆಯ ಮೇಲೆ ಮಂಡಿಯೂರಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪ್ರಜಾಪತ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಮಾನಸಿಕ ಅಸ್ವಸ್ಥನಾಗಿರುವ ಪ್ರಜಾಪತ್ ಈ ಹಿಂದೆ ತನ್ನ ತಂದೆಯ ಕಣ್ಣಿಗೆ ಹಾನಿ ಉಂಟುಮಾಡಿದ್ದ. ಆತನ ವಿರುದ್ಧ ಪ್ರಕರಣವೂ ದಾಖಲಾಗಿತ್ತು.


