ಇಟ್ಟುಕೊಂಡ ಗುರಿ 8 ಕೋಟಿ, ಆದರೆ ಆಹಾರ ಧಾನ್ಯ ತಲುಪಿದ್ದು ಕೇವಲ 20.26 ಲಕ್ಷ ವಲಸೆ ಕಾರ್ಮಿಕರಿಗೆ ಮಾತ್ರ!

ಲಾಕ್ ಡೌನ್ ಸಮಯದಲ್ಲಿ ರಾಜ್ಯ ಸರ್ಕಾರಗಳಿಗೆ 20.36 ಲಕ್ಷ ವಲಸೆ ಕೂಲಿ ಕಾರ್ಮಿಕರಿಗೆ ಮಾತ್ರ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ರೈಲಿನಲ್ಲಿ ತಮ್ಮೂರಿಗೆ ಪ್ರಯಾಣಿಸುತ್ತಿರುವ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿರುವುದು
ರೈಲಿನಲ್ಲಿ ತಮ್ಮೂರಿಗೆ ಪ್ರಯಾಣಿಸುತ್ತಿರುವ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿರುವುದು

ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ರಾಜ್ಯ ಸರ್ಕಾರಗಳಿಗೆ 20.36 ಲಕ್ಷ ವಲಸೆ ಕೂಲಿ ಕಾರ್ಮಿಕರಿಗೆ ಮಾತ್ರ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೇಷನ್ ಕಾರ್ಡು ಹೊಂದಿಲ್ಲದಿರುವ 8 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಗುರಿ ಹೊಂದಲಾಗಿತ್ತು ಎಂದು ಕೇಂದ್ರ ಆಹಾರ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಿಂದ ತಿಳಿದುಬಂದಿದೆ.

ಕೊರೋನಾ ಲಾಕ್ ಡೌನ್ ನಿಂದಾಗಿ ವಲಸೆ ಕೂಲಿ ಕಾರ್ಮಿಕರು ಹಸಿವಿನಿಂದ ನರಳಬಾರದು ಎಂದು ಕೇಂದ್ರ ಸರ್ಕಾರ ಮೇ 14ರಂದು ಕುಟುಂಬದಲ್ಲಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ, 1 ಕೆಜಿ ಬೇಳೆ ನೀಡಬೇಕೆಂದು ಘೋಷಿಸಿತ್ತು. 20 ಲಕ್ಷ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ಪ್ಯಾಕೇಜ್ ನಡಿ ಎರಡು ತಿಂಗಳಲ್ಲಿ 8 ಕೋಟಿ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸುವ ಯೋಜನೆ ಇದಾಗಿತ್ತು.

ರೇಷನ್ ಕಾರ್ಡು ಇಲ್ಲದಿರುವವರಿಗೆ ದೇಶದ ಯಾವುದೇ ಭಾಗದಲ್ಲಿ ಉಚಿತವಾಗಿ ಅಕ್ಕಿ, ಬೇಳೆಕಾಳು ನೀಡುವ ಯೋಜನೆ ಇದಾಗಿದೆ.
ಈ ವಿತರಣೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆಹಾರ ಸಚಿವಾಲಯ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 4.42 ಲಕ್ಷ ಟನ್ ಆಹಾರಧಾನ್ಯಗಳನ್ನು, 10,131 ಟನ್ ಆಹಾರಧಾನ್ಯಗಳನ್ನು 20.26 ಲಕ್ಷ ಫಲಾನುಭವಿಗಳಿಗೆ ವಿತರಿಸಿದ್ದಾರೆ. ಕೇವಲ ಶೇಕಡಾ 2.25ರಷ್ಟು ವಲಸೆ ಕಾರ್ಮಿಕ ಫಲಾನುಭವಿಗಳಿಗೆ ಮಾತ್ರ ಇದರ ಪ್ರಯೋಜನ ಸಿಕ್ಕಿದೆ. ಒಟ್ಟು 7.99 ಲಕ್ಷ ಟನ್  ಗುರಿಗೆ ಹೋಲಿಸಿದರೆ ಮೇ ಮತ್ತು ಜೂನ್ ತಿಂಗಳಲ್ಲಿ ಇದುವರೆಗೆ ಆಹಾರ ಧಾನ್ಯಗಳು ವಿತರಣೆಯಾಗಿದ್ದು ಬಹಳ ಕಡಿಮೆಯಾಗಿದೆ.

ಇನ್ನು 1.96 ಕೋಟಿ ವಲಸೆ ಕುಟುಂಬಗಳಿಗೆ ಎರಡು ತಿಂಗಳವರೆಗೆ 39 ಸಾವಿರ ಟನ್ ಬೇಳೆಕಾಳನ್ನು ವಿತರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿ, 28,306 ಟನ್ ಬೇಳೆಕಾಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಅದರಲ್ಲಿ ವಿತರಣೆಯಾಗಿದ್ದು ಕೇವಲ 15,413 ಟನ್ ಮಾತ್ರ ಎಂದು ಅಂಕಿಅಂಶ ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com