ವಾಹನದಾರರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ

ಕೋವಿಡ್ ಕಾಟದಿಂದಾಗಿ ಚಾಲನಾ ಪರವಾನಗಿ, ಪರ್ಮಿಟ್ ಅವಧಿ ಮುಗಿದು ನವೀಕರಣಗೊಳಿಸಲಾಗದೆ ಪರಿತಪಿಸುತ್ತಿದ್ದವರಿಗೆ ಮತ್ತೊಮ್ಮೆ ಮಾನ್ಯತೆ ಅವಧಿಯನ್ನು ಈ ವರ್ಷದ ಸೆಪ್ಟಂಬರ್ ವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಂಗಳವಾರ ತಿಳಿಸಿದ್ದಾರೆ. 
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನವದೆಹಲಿ: ವಾಹನದಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ.  ಕೋವಿಡ್ ಕಾಟದಿಂದಾಗಿ ಚಾಲನಾ ಪರವಾನಗಿ, ಪರ್ಮಿಟ್ ಅವಧಿ ಮುಗಿದು ನವೀಕರಣಗೊಳಿಸಲಾಗದೆ ಪರಿತಪಿಸುತ್ತಿದ್ದವರಿಗೆ ಮತ್ತೊಮ್ಮೆ ಮಾನ್ಯತೆ ಅವಧಿಯನ್ನು ಈ ವರ್ಷದ ಸೆಪ್ಟಂಬರ್ ವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಂಗಳವಾರ ತಿಳಿಸಿದ್ದಾರೆ. 

ಈ ಕುರಿತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಿದ್ದಾರೆ. ಫಿಟ್ ನೆಸ್, ಪರ್ಮಿಟ್ (ಎಲ್ಲ ರೀತಿಯ) ಚಾಲನಾ ಪರವಾನಗಿ, ನೋಂದಣಿ ಅವಧಿ ಮುಗಿದಿದ್ದು ಲಾಕ್ ಡೌನ್ ಕಾರಣದಿಂದ ನವೀಕರಣ ಮಾಡಿಸಿಕೊಳ್ಳದಿದ್ದರೂ   ಅವುಗಳ ಮಾನ್ಯತೆಯನ್ನು ಎರಡನೇ ಬಾರಿ ವಿಸ್ತರಿಸಿದೆ. ಮೊದಲು ಮಾರ್ಚ್ 30 ರಂದು ಜೂನ್ 30 ವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿ ಆದೇಶ ಹೊರಡಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com