ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮದ್ರಾಸಿನ ಐಐಟಿ ನಂ.1, ಬೆಂಗಳೂರಿನ ಐಐಎಸ್ ಸಿಗೆ 2ನೇ ಸ್ಥಾನ

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮದ್ರಾಸ್ಸಿನ ಐಐಟಿ ಅಗ್ರ ಶ್ರೇಯಾಂಕ ಪಡೆದರೆ, ಉದ್ಯಾನನಗರಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ( ಐಐಎಸ್ ಸಿ) ಎರಡನೇ ಶ್ರೇಯಾಂಕ ಪಡೆದುಕೊಂಡಿದೆ. ದೆಹಲಿಯ ಐಐಟಿ ಮೂರನೇ ಸ್ಥಾನದಲ್ಲಿದೆ. 
ಮದ್ರಾಸ್ ಐಐಟಿ, ಬೆಂಗಳೂರಿನ ಐಐಎಸ್ ಸಿ
ಮದ್ರಾಸ್ ಐಐಟಿ, ಬೆಂಗಳೂರಿನ ಐಐಎಸ್ ಸಿ

ನವದೆಹಲಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮದ್ರಾಸ್ಸಿನ ಐಐಟಿ ಅಗ್ರ ಶ್ರೇಯಾಂಕ ಪಡೆದರೆ, ಉದ್ಯಾನನಗರಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ( ಐಐಎಸ್ ಸಿ) ಎರಡನೇ ಶ್ರೇಯಾಂಕ ಪಡೆದುಕೊಂಡಿದೆ. ದೆಹಲಿಯ ಐಐಟಿ ಮೂರನೇ ಸ್ಥಾನದಲ್ಲಿದೆ. 

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಇಂದು  ರಾಷ್ಟ್ರೀಯ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಶ್ರೇಯಾಂಕ ಪಟ್ಟಿಯನ್ನು ಪ್ರಕಟ ಮಾಡಿದೆ.ಬೆಂಗಳೂರಿನ ಐಐಎಸ್ ಸಿ, ಜವಹರ್ ಲಾಲ್ ನೆಹರು ವಿವಿ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ ದೇಶದ ಅತ್ಯುತ್ತಮ ಮೂರು ವಿಶ್ವವಿದ್ಯಾಲಯಗಳಾಗಿವೆ.ಅಹಮದಾಬಾದ್, ಬೆಂಗಳೂರು ಮತ್ತು ಕಲ್ಕತ್ತಾದ ಐಐಎಂಗಳು ನಂತರದ ಸ್ಥಾನದಲ್ಲಿವೆ.

ಅತ್ಯುತ್ತಮ ಕಾಲೇಜುಗಳ ಪೈಕಿಯಲ್ಲಿ ಮಿರಾಂದಾ ಕಾಲೇಜ್ ಅಗ್ರ ಸ್ಥಾನದಲ್ಲಿದ್ದರೆ, ಲೇಡಿ ಶ್ರೀರಾಮ ಮಹಿಳಾ ಕಾಲೇಜು ಮತ್ತು ಸೆಂಟ್ ಸ್ಟೇಫೆನ್ಸ್ ಕಾಲೇಜು ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ಪಡೆದುಕೊಂಡಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ. 

ಐಐಟಿ ಮದ್ರಾಸ್, ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ದೇಶದ ಮೂರು ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜ್ ಗಳಾಗಿವೆ. ಫಾರ್ಮಸಿ ವಲಯದಲ್ಲಿ ದೆಹಲಿಯ ಜಾಮಿಯಾ ಹಮ್ ಡಾರ್ಡ್ ಸಂಸ್ಥೆ ಮೊದಲ ಸ್ಥಾನದಲ್ಲಿದ್ದರೆ ಪಂಜಾಬ್ ಹಾಗೂ ಚಂಡೀಘಡದ ವಿಶ್ವವಿದ್ಯಾನಿಲಯಗಳು ಎರಡನೇ ಸ್ಥಾನ, ಮೊಹಾಲಿಯ ರಾಷ್ಟ್ರೀಯ ಔಷಧೀಯ ಸಂಶೋಧನಾ ಸಂಸ್ಥೆ ಮೂರನೇ ಸ್ಥಾನದಲ್ಲಿದೆ.

ಮೆಡಿಕಲ್ ಕಾಲೇಜ್ ಗಳ ವಲಯದಲ್ಲಿ ದೆಹಲಿಯ ಏಮ್ಸ್ ಪ್ರಥಮ ಸ್ಥಾನದಲ್ಲಿದ್ದು, ಚಂಢೀಗಢದ ಪಿಜಿಐ, ಮತ್ತು ವೆಲ್ಲೂರಿನ ಸಿಎಂಸಿ ನಂತರದ ಸ್ಥಾನ ಪಡೆದುಕೊಂಡಿವೆ. ಏಪ್ರಿಲ್ ತಿಂಗಳಲ್ಲಿ ವಾರ್ಷಿಕ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುತಿತ್ತು. ಆದರೆ. ಈ ಬಾರಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಜೂನ್ ತಿಂಗಳಲ್ಲಿ ಪ್ರಕಟಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com