ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ತೆಗೆದ ಕುಟುಂಬ ಸದಸ್ಯ: ಶಂಕಿತ ಕೋವಿಡ್-19 ವ್ಯಕ್ತಿ ಸಾವು

ಬಿಸಿಲು ಹವೆಯನ್ನು ತಡೆಯಲಾಗದೇ ಕುಟುಂಬ ಸದಸ್ಯರು ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ನ್ನು ತೆಗೆದಿದ್ದು ಶಂಕಿತ ಕೋವಿಡ್-19 ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ತೆಗೆದ ಕುಟುಂಬ ಸದಸ್ಯ: ಶಂಕಿತ ಕೋವಿಡ್-19 ವ್ಯಕ್ತಿ ಸಾವು
ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ತೆಗೆದ ಕುಟುಂಬ ಸದಸ್ಯ: ಶಂಕಿತ ಕೋವಿಡ್-19 ವ್ಯಕ್ತಿ ಸಾವು

ಕೋಟಾ: ಬಿಸಿಲು ಹವೆಯನ್ನು ತಡೆಯಲಾಗದೇ ಕುಟುಂಬ ಸದಸ್ಯರು ಕೂಲರ್ ಚಾಲೂ ಮಾಡಲು ವೆಂಟಿಲೇಟರ್ ನ್ನು ತೆಗೆದಿದ್ದು ಶಂಕಿತ ಕೋವಿಡ್-19 ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಮಹಾರಾವ್ ಭೀಮ್ ಸೇನ್ ಆಸ್ಪತ್ರೆ(ಎಂಬಿಎಸ್)ಯಲ್ಲಿ ಈ ಘಟನೆ ನಡೆದಿದೆ. 42 ವರ್ಷದ  ಕೋವಿಡ್-19 ಶಂಕಿತ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕುಟುಂಬ ಸದಸ್ಯರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದರು. ವೈದ್ಯ ವರುಣ್ ಘಟನೆ ನಡೆದಾಗ ಡ್ಯುಟಿ ಡಾಕ್ಟರ್ ಆಗಿದ್ದರು. ಮೃತರ ಕುಟುಂಬ ಸದಸ್ಯರು ವೈದ್ಯಕೀಯ ಸಿಬ್ಬಂದಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದರು.

ಹಿರಿಯ ವೈದ್ಯರಾದ ಡಾ.ಸಕ್ಸೇನಾ ಆಸ್ಪತ್ರೆಗೆ ತಲುಪಿದಾಗ ನರ್ಸಿಂಗ್ ಸಿಬ್ಬಂದಿಗಳು ಮೌಖಿಕವಾಗಿ ಮಾಹಿತಿ ನೀಡಿದ್ದು ರೋಗಿಯನ್ನು ಭೇಟಿ ಮಾಡಲು ಬಂದಿದ್ದ ಕುಟುಂಬ ಸದಸ್ಯರು ತಾವು ತಂದಿದ್ದ ಕೂಲರ್ ನ್ನು ಹಾಕುವುದಕ್ಕಾಗಿ ವೆಂಟಿಲೇಟರ್ ಗೆ ಇದ್ದ ವಿದ್ಯುತ್ ವ್ಯವಸ್ಥೆಯನ್ನು ತೆಗೆದಿದ್ದಾರೆ. ನಂತರ ಸ್ವಲ್ಪ ಸಮಯದ ವರೆಗೆ ವೆಂಟಿಲೇಟರ್ ಬ್ಯಾಟರಿ ಆಧಾರದಲ್ಲಿ ಕಾರ್ಯನಿರ್ವಹಿಸಿದೆ. ನಂತರ ಆಫ್ ಆಗಿದ್ದರ ಪರಿಣಾಮ ರೋಗಿಯ ಉಸಿರಾಟದ ಸ್ಥಿತಿ ಉಲ್ಬಣವಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮ ಈ ಬಗ್ಗೆ ವರದಿ ಪ್ರಕಟಿಸುತ್ತಿದ್ದಂತೆಯೇ ಘಟನೆ ಬಗ್ಗೆ ಸಮಿತಿ ರಚನೆ ಮಾಡಿ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಮೃತ ವ್ಯಕ್ತಿಯ ಕೋವಿಡ್-19 ಪರೀಕ್ಷಾ ವರದಿ ನೆಗೆಟೀವ್ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com