ಪರೀಕ್ಷೆಯೇನೋ ರದ್ದಾಗಿದೆ, ಆದರೆ ಮುಂದೇನು?, ಸಿಬಿಎಸ್ ಇ, ಐಸಿಎಸ್ಇ ಮಕ್ಕಳನ್ನು ಕಾಡುತ್ತಿದೆ ಹತ್ತಾರು ಪ್ರಶ್ನೆಗಳು

ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 10 ಮತ್ತು 12ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸಿಬಿಎಸ್ ಇ ಮತ್ತು ಐಸಿಎಸ್ಇ ಮಂಡಳಿಗಳು ರದ್ದು ಪಡಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 10 ಮತ್ತು 12ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸಿಬಿಎಸ್ ಇ ಮತ್ತು ಐಸಿಎಸ್ಇ ಮಂಡಳಿಗಳು ರದ್ದು ಪಡಿಸಿವೆ.

ಆದರೆ ವಿದ್ಯಾರ್ಥಿಗಳ ಆತಂಕ, ಗೊಂದಲ ಮಾತ್ರ ಕಡಿಮೆಯಾಗಿಲ್ಲ, ಪರೀಕ್ಷೆಯನ್ನೇನೋ ರದ್ದುಪಡಿಸಿದ್ದಾರೆ, ಆದರೆ ಮುಂದೇನು ಎಂಬ ಚಿಂತೆ ಮಕ್ಕಳು ಮತ್ತು ಪೋಷಕರನ್ನು ಕಾಡುತ್ತಿದೆ. ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆಯೇ ಅಥವಾ ವಿದ್ಯಾರ್ಥಿಗಳಿಗೆ ಆಯ್ಕೆ ನೀಡಿದ್ದಾರೆಯೇ, ಇಂಟರ್ನಲ್ ಎಸ್ಸೆಸ್ಸ್ ಮೆಂಟ್ ಗೆ ಮಾನದಂಡಗಳೇನು, ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಹೇಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು ಏನು ಮಾಡಬೇಕು ಹೀಗೆ ಹತ್ತಾರು ಪ್ರಶ್ನೆಗಳು ಮಕ್ಕಳು ಮತ್ತು ಪೋಷಕರನ್ನು ಕಾಡುತ್ತಿದೆ.

ಸಿಬಿಎಸ್ ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮತ್ತೆ ಬರೆಯುವ ಅಥವಾ ಕಳೆದ ಮೂರು ಇಂಟರ್ನಲ್ ಪರೀಕ್ಷೆಗಳಲ್ಲಿ ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಅಂಕ ನೀಡಲಾಗುತ್ತದೆ. ಹತ್ತನೇ ತರಗತಿಯವರಿಗೆ ಮರು ಪರೀಕ್ಷೆ ವ್ಯವಸ್ಥೆ ಇರುವುದಿಲ್ಲ. ಐಸಿಎಸ್ ಇ ಮಂಡಳಿಯ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಆಯ್ಕೆಗಳಿರುವುದಿಲ್ಲ.
ಸಿಬಿಎಸ್ಇ ಪರೀಕ್ಷೆ, ವಿದ್ಯಾರ್ಥಿಗಳಿಗೆ ನೀಡುವ ಅಂಕಗಳ ಸಂಬಂಧ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ, ಇಂದು ಅದು ಸುಪ್ರೀಂ ಕೋರ್ಟ್ ನಲ್ಲಿ ತನ್ನ ಯೋಜನೆಗಳ ಬಗ್ಗೆ ಅಫಿಡವಿಟ್ಟು ಸಲ್ಲಿಸಲಿದೆ.

ಪರೀಕ್ಷೆ ರದ್ದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ 12ನೇ ತರಗತಿ ವಿದ್ಯಾರ್ಥಿ ರಮೇಶ್ ಜಾ, ಪರೀಕ್ಷೆ ರದ್ದಾಗಿದೆ ಎಂದಷ್ಟೇ ಹೇಳಿದ್ದಾರೆ, ಆದರೆ ಈ ಬಗ್ಗೆ ನಮಗೆ ಸಾಕಷ್ಟು ಗೊಂದಲವಿದೆ. ಪರೀಕ್ಷೆ ಬೇಕಿದ್ದರೆ ಬರೆಯಬಹುದು, ಇಲ್ಲವೇ ಇಂಟರ್ನಲ್ ಅಸ್ಸೆಸ್ಸ್ ಮೆಂಟ್ ಮಾರ್ಕ್ ನ್ನು ಪರಿಗಣಿಸಬಹುದು ಎನ್ನುತ್ತಾರೆ. ಆದರೆ ಎರಡನೆಯದ್ದನ್ನು ಯಾವ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಬಹುದು, ಸ್ಪಷ್ಟತೆಯಿಲ್ಲ ಮೂರು ತಿಂಗಳಿನಿಂದ ಪರೀಕ್ಷೆ ಮಾಡಿಲ್ಲ, ಇನ್ನೂ ಗೊಂದಲವಿದೆ ನಮ್ಮಲ್ಲಿ ಎನ್ನುತ್ತಾರೆ.

ಶೃತಿ ದಾಸ್ ಎನ್ನುವ ಮತ್ತೊಬ್ಬ ವಿದ್ಯಾರ್ಥಿನಿ, ಇಂಟರ್ನಲ್ ಅಸ್ಸೆಸ್ಸ್ ಮೆಂಟ್ ಗೆ ಅರ್ಹತೆಗಳೇನು, ಯಾವ ಕೊನೆಯ ಮೂರು ಪರೀಕ್ಷೆಗಳ ಬಗ್ಗೆ ಹೇಳುತ್ತಿದ್ದಾರೆ, ಸರಾಸರಿ ಅಂಕ ಹೇಗೆ ಲೆಕ್ಕ ಹಾಕುತ್ತಾರೆ, ದೆಹಲಿ ವಿಶ್ವ ವಿದ್ಯಾಲಯಗಳಂತಹ ವಿ.ವಿಗಳಲ್ಲಿ ಕಟ್ ಆಫ್ ಮಾರ್ಕ್ಸ್  ಹೆಚ್ಚಿರುವಾಗ ಇದು ನಮ್ಮ ಪ್ರವೇಶ ಪ್ರಕ್ರಿಯೆ ಮೇಲೆ ಹೇಗೆ ಪರಿಣಾಮ ಬೀರಬಹುದು, ಯಾರೂ ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com