ನಮ್ಮ ಯೋಧರ ಹತ್ಯೆಯಾಗುತ್ತಿರುವಾಗ ಚೀನಾ ಹಣ ತೆಗೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ಅಮರಿಂದರ್ ಸಿಂಗ್

ಚೀನಾ-ಭಾರತ ಗಡಿ ಘರ್ಷಣೆಯ ನಡುವೆಯೂ ಸಹ ಪಿಎಂ ಕೇರ್ಸ್ ಗೆ ಚೀನಾ ಕಂಪನಿಗಳಿಂದ ಹಣ ಪಡೆಯಲಾಗುತ್ತಿರುವುದನ್ನು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪ್ರಶ್ನಿಸಿದ್ದಾರೆ.
ಸಿಎಂ ಅಮರಿಂದರ್ ಸಿಂಗ್
ಸಿಎಂ ಅಮರಿಂದರ್ ಸಿಂಗ್

ಚಂಡೀಗಢ: ಚೀನಾ-ಭಾರತ ಗಡಿ ಘರ್ಷಣೆಯ ನಡುವೆಯೂ ಸಹ ಪಿಎಂ ಕೇರ್ಸ್ ಗೆ ಚೀನಾ ಕಂಪನಿಗಳಿಂದ ಹಣ ಪಡೆಯಲಾಗುತ್ತಿರುವುದನ್ನು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅಮರಿಂದರ್ ಸಿಂಗ್, ಕೋವಿಡ್-19 ವಿರುದ್ಧದ ಪರಿಣಾಮಕಾರಿ ಹೋರಾಟಕ್ಕೆ ಪಿಎಂ ಕೇರ್ಸ್ ಫಂಡ್ ನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಚೀನಾದ ಕೆಲವು ಕಂಪನಿಗಳು ದೇಣಿಗೆ ನೀಡಿವೆ ಎಂದು ಆರೋಪಿಸಿದ್ದಾರೆ. "ನಾವು ಚೀನಾದ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಬೇಕು"ಎಂದೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಯೋಧರು ಗಡಿಯಲ್ಲಿ ಹತ್ಯೆಯಾಗುತ್ತಿರಬೇಕಾದರೆ ನಾವು ಚೀನಾದ ಹಣವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಪಿಎಂ-ಕೇರ್ಸ್ ಗೆ ದೇಣಿಗೆ ನೀಡಿರುವ ಚೀನಾ ಕಂಪನಿಗಳ ಹೆಸರನ್ನೂ ಸುದ್ದಿಗೋಷ್ಠಿಯ ವೇಳೆ ಅಮರಿಂದರ್ ಸಿಂಗ್ ಬಹಿರಂಗಗೊಳಿಸಿದ್ದಾರೆ.

"ಎಷ್ಟು ಹಣ ಬಂದಿದೆ ಎಂಬುದು ಮುಖ್ಯವಲ್ಲ, ಕೋವಿಡ್-19 ಕ್ಕೆ ಚೀನಾನೇ ಕಾರಣವಾಗಿರುವಾಗ, ದೇಶದ ಭಾಗವನ್ನು ಅತಿಕ್ರಮಣ ಮಾಡುತ್ತಿರುವ ಸಂದರ್ಭದಲ್ಲಿ ಚೀನಾದ ಒಂದೇ ಒಂದು ರೂಪಾಯಿ ಕೂಡ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದು, ಚೀನಾದ ಕಂಪನಿಗಳಿಂದ ಬಂದಿರುವ ಹಣವನ್ನು ಅವರನ್ನು ನೋಡಿಕೊಳ್ಳುವುದಕ್ಕಾಗಿಯೇ ವಾಪಸ್ ಕಳುಹಿಸಬೇಕು ಎಂದು ಸಿಂಗ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com