
ದೆಹಲಿ: ಈಶಾನ್ಯ ದೆಹಲಿಯ ಚರಂಡಿಗಳಲ್ಲಿ 4 ಮೃತ ದೇಹಗಳು ಪತ್ತೆಯಾಗಿವೆ.
ಆದರೆ ಈ ಮೃತ ದೇಹಗಳು ಈಶಾನ್ಯ ದೆಹಲಿಯಲ್ಲಿನ ಗಲಭೆಗೆ ಸಂಬಂಧಪಟ್ಟಿದ್ದೋ ಅಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ಅಧಿಕಾರಿಗಳು ಗಲಭೆ ಸಾವು-ನೋವಿಗೆ ಸಂಬಂಧಿಸಿದ ಪರಿಷ್ಕೃತ ಅಂಕಿ-ಅಂಶಗಳನ್ನು ಪ್ರಕಟಿಸಿಲ್ಲ.
ಬೆಳಿಗ್ಗೆ ವೇಳೆಗೆ ಪೊಲೀಸ್ ಪಿಸಿಆರ್ ಗೆ ಭಗೀರತ್ ನಗರದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿರುವುದರ ಬಗ್ಗೆ ಕರೆ ಬಂದಿತ್ತು. ಮಧ್ಯಾಹ್ನದ ವೇಳೆಗೆ ಎರಡನೇ ಮೃತದೇಹ ಅದೇ ಚರಂಡಿಯಲ್ಲಿ ಪತ್ತೆಯಾಗಿತ್ತು. ಮೂರನೇ ಮೃತ ದೇಹ ಗೋಕುಲ್ ಪುರಿ ಪೊಲೀಸ್ ಠಾಣೆ ಬಳಿ ಇರುವ ಚರಂಡಿಯಲ್ಲಿ ಪತ್ತೆಯಾಗಿದ್ದರೆ ನಾಲ್ಕನೆ ಮೃತದೇಹ ಶಿವ್ ವಿಹಾರ್ ಬಳಿ ಇರುವ ಚರಂಡಿಯಲ್ಲಿ ಪತ್ತೆಯಾಗಿದೆ. ಪತ್ತೆಯಾಗಿರುವ ಮೃತದೇಹಗಳ ಗುರುತು ಇನ್ನೂ ತಿಳಿದುಬಂದಿಲ್ಲ.
Advertisement