ಸಿಎಎ ಪ್ರತಿಭಟನೆಯಲ್ಲಿ ಬಾಗವಹಿಸಿದ್ದ ಪೋಲಿಷ್ ವಿದ್ಯಾರ್ಥಿಗೆ ಭಾರತವನ್ನು ತೊರೆಯುವಂತೆ ಸೂಚನೆ

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಿದ ಜಾದವ್‌ಪುರ್ ವಿಶ್ವವಿದ್ಯಾಲಯದ ಪೋಲಿಷ್ ವಿದ್ಯಾರ್ಥಿಯನ್ನು  ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ದೇಶವನ್ನು ತೊರೆಯುವಂತೆ ಕೇಳಿದೆ ಎಂದು ವಿಶ್ವವಿದ್ಯಾನಿಲಯ  ಮೂಲಗಳು ಭಾನುವಾರ ತಿಳಿಸಿವೆ.
ಜಾದವ್‌ಪುರ್  ವಿಶ್ವವಿದ್ಯಾಲಯ
ಜಾದವ್‌ಪುರ್ ವಿಶ್ವವಿದ್ಯಾಲಯ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಿದ ಜಾದವ್‌ಪುರ್ ವಿಶ್ವವಿದ್ಯಾಲಯದ ಪೋಲಿಷ್ ವಿದ್ಯಾರ್ಥಿಯನ್ನು  ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ದೇಶವನ್ನು ತೊರೆಯುವಂತೆ ಕೇಳಿದೆ ಎಂದು ವಿಶ್ವವಿದ್ಯಾನಿಲಯ  ಮೂಲಗಳು ಭಾನುವಾರ ತಿಳಿಸಿವೆ.

ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ಬಾಂಗ್ಲಾದೇಶದ ವಿದ್ಯಾರ್ಥಿನಿಯೊಬ್ಬಳಿಗೆ ಎಫ್‌ಆರ್‌ಆರ್‌ಒ ಇದೇ ರೀತಿಯ ನಿರ್ದೇಶನವನ್ನು ನೀಡಿದ್ದು, ಕ್ಯಾಂಪಸ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅವಳಿಗೆ ಈ ಆದೇಶ ಕೊಡಲಾಗಿತ್ತು. ಇದೀಗ ಪೋಲಿಷ್  ವಿದ್ಯಾರ್ಥಿಗೆ ಸಹ ಇದೇ ಬಗೆಯಲ್ಲಿ ಹೇಳಲಾಗಿದೆ.

ಕಂಪಾರಿಟಿವ್ ಲಿಟರೇಚರ್ ವಿಭಾಗದ ಪೋಲಿಷ್ ವಿದ್ಯಾರ್ಥಿ ಕಮಿಲ್  ಸೀಡ್ಸಿನ್ಸ್ಕಿಯನ್ನು ಎಫ್‌ಆರ್‌ಆರ್‌ಒ ತನ್ನ ಕೋಲ್ಕತಾ ಕಚೇರಿಗೆ ಭೇಟಿ ನೀಡುವಂತೆ ಕೇಳಿದೆ. 

"ವಿದ್ಯಾರ್ಥಿ ವೀಸಾದಲ್ಲಿ ಭಾರತದಲ್ಲಿ ಉಳಿದುಕೊಂಡಿರುವ ವಿದೇಶಿ ಪ್ರಜೆಯ ವರ್ತನೆ ಹೀಗಿರುವುದು ಸರಿಯಲ್ಲ. ಎಂದು ದು ಆರೋಪಿಸಿ ನೋಟಿಸ್ ಸ್ವೀಕರಿಸಿದ ಹದಿನೈದು ದಿನಗಳೊಳಗೆ ದೇಶವನ್ನು ತೊರೆಯುವಂತೆ ಎಫ್‌ಆರ್‌ಆರ್‌ಒ ಕೇಳಿದೆ.ಇದಾಗಲೇ ವಿದ್ಯಾರ್ಥಿ ಸೀಡ್ಸಿನ್ಸ್ಕಿಗೆ ನೋಟೀಸ್ ನೀಡಲಾಗಿದೆ"

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಗರದ ಮೌಲಾಲಿ ಪ್ರದೇಶದಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಸಿಡ್ಸಿನ್ಸ್ಕಿ ಗೆ ಎಫ್‌ಆರ್‌ಆರ್‌ಒ ನೋಟೀಸ್ ಜಾರಿ ಮಾಡಿದೆ."ಸೈಡ್ಸಿನ್ಸ್ಕಿಗೆ ಯಾವುದೇ ರಾಜಕೀಯ ಒಲವು ಇಲ್ಲ ಆದರೆ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿರುವ ಆತನ ಉತ್ಸಾಹ ಹಾಗೂ ಅಲ್ಲಿನ ಭಾವಚಿತ್ರಗಳು ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. "ಮೂಲಗಳು ತಿಳಿಸಿವೆ.

ಇದೇವೇಳೆ ಈ ವರ್ಷ ತನ್ನ ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಬೇಕಿದ್ದ ವಿದ್ಯಾರ್ಥಿ ಸಿಡ್ಸಿನ್ಸ್ಕಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.ಜಾದವ್‌ಪುರ್ ವಿಶ್ವವಿದ್ಯಾಲಯದಉಪಕುಲಪತಿ ಸುರಂಜನ್ ದಾಸ್ ಮತ್ತು ರಿಜಿಸ್ಟ್ರಾರ್ ಸ್ನೇಹಮಂಜು ಬಸು ಕೂಡ ಕರೆಗಳನ್ನು ಸ್ವೀಕರಿಸುತ್ತಿ;ಲ್ಲ. ಇನ್ನು ಈ ವಿದ್ಯಾರ್ಥಿ ಹಿಂದೆ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ಬಂಗಾಳಿ ಅಧ್ಯಯನ ಮಾಡಿದ್ದ ಎಂಬ ಮಾಹಿತಿ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com