
ನವದೆಹಲಿ: 23 ಶೆಲ್ ಕಂಪೆನಿಗಳ ಜಾಲ ಬಳಸಿಕೊಂಡು ಸುಮಾರು 7 ಸಾವಿರದ 896 ಕೋಟಿ ರೂಪಾಯಿ ಮೌಲ್ಯದ ನಕಲಿ ಬೆಲೆಪಟ್ಟಿ ದಂಧೆಯನ್ನು ತೆರಿಗೆ ಇಲಾಖೆ ಅಧಿಕಾರಿಗಳು ಬೇಧಿಸಿದ್ದಾರೆ.
ಪಶ್ಚಿಮ ದೆಹಲಿ ಆಯುಕ್ತ ಕಚೇರಿಯ ಕೇಂದ್ರ ತೆರಿಗೆ ಇಲಾಖೆಯ ಅಧಿಕಾರಿಗಳು ಈ ಬೃಹತ್ ದಂಧೆಯನ್ನು ಬೇಧಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
17 ನಕಲಿ ಕಂಪೆನಿಗಳ ಮೂಲಕ ಹಣವನ್ನು ದುರುಪಯೋಗಪಡಿಸಿಕೊಂಡು ಸುಮಾರು 436 ಕೋಟಿ ರೂಪಾಯಿ ನಕಲಿ ಇನ್ವಾಯ್ಸ್ ಹೊರಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ತೆರಿಗೆ ಮತ್ತು ಸೇವಾ ತೆರಿಗೆ ಇಲಾಖೆಯ ಪೂರ್ವ ಕಮಿಷನರೇಟ್ ಅಧಿಕಾರಿಗಳು ಮೂವರನ್ನು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.
Advertisement