ಪವನ್ ಗುಪ್ತಾ
ಪವನ್ ಗುಪ್ತಾ

ನಿರ್ಭಯಾ ಕೇಸ್: ಗಲ್ಲು ಜಾರಿಗೆ ಇದ್ದ ಕಡೇಯ ಅಡ್ಡಿ ನಿವಾರಣೆ? ಪವನ್ ಗುಪ್ತಾ ಕ್ಷಮಾದಾನ ಅರ್ಜಿ ವಜಾ 

 2012 ರ ನಿರ್ಭಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಕಡೇ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ತಿರಸ್ಕರಿಸಿದ್ದಾರೆ.ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೀಡಾಗಿರುವ ನಾಲ್ವರಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಿದ್ದ ಕಡೇಯ ಅಪರಾಧಿಯಾಗಿದ್ದಾರೆ. ಇತರ ಮೂವರಾದ ವಿನಯ್ ಕುಮಾರ್, ಅಕ್ಷಯ್ ಠಾಕೂರ್, ಮುಖೇಶ್ ಸಿ

ನವದೆಹಲಿ:  2012 ರ ನಿರ್ಭಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಕಡೇ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ತಿರಸ್ಕರಿಸಿದ್ದಾರೆ.ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೀಡಾಗಿರುವ ನಾಲ್ವರಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಿದ್ದ ಕಡೇಯ ಅಪರಾಧಿಯಾಗಿದ್ದಾರೆ. ಇತರ ಮೂವರಾದ ವಿನಯ್ ಕುಮಾರ್, ಅಕ್ಷಯ್ ಠಾಕೂರ್, ಮುಖೇಶ್ ಸಿಂಗ್ ಅವರುಗಳ ಅರ್ಜಿಯನ್ನು ಈಗಾಗಲೇ ರಾಷ್ಟ್ರಪತಿಗಳು ವಜಾಗೊಳಿಸಿದ್ದಾರೆ.

ಬುಧವಾರ ನಡೆದ ಬೆಳವಣಿಗೆಯೊಡನೆ ನಾಲ್ವರು ಅಪರಾಧಿಗಳ ಎಲ್ಲಾ ಕಾನೂನು ರಹದಾರಿಗಳು ಅಂತ್ಯವಾಗಿದೆ. ಅಲ್ಲದೆ ಮುಂದಿನ ಹದಿನೈದು ದಿನಗಳಲ್ಲಿ ಅವರನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ. ಈ ಸಂಬಂಧ ನಾಲ್ವರ ವಿರುದ್ಧ ಹೊಸ ಡೆತ್ ವಾರಂಟ್ ಅನ್ನುದೆಹಲಿ ನ್ಯಾಯಾಲಯ ಹೊರಡಿಸಲಿದೆ

2014 ರ ಶತ್ರುಘ್ನಚೌಹಾಣ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಪ್ರಕಾರ, ಅಪರಾಧಿಗಳಿಗೆ ತಮ್ಮ ವ್ಯವಹಾರಗಳನ್ನು ತೀರ್ಮಾನಿಸಲು ಮರಣದಂಡನೆಗೆ “ತಯಾರಿ” ಮಾಡಲು 14 ದಿನಗಳ ಕಾಲಾವಕಾಶ ನೀಡಬೇಕು.

ನಾಲ್ವರು ಆರೋಪಿಗಳನ್ನು ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕಿತ್ತು. ಸೋಮವಾರ, ಅವರ ಮರಣದಂಡನೆಗೆ ಕೆಲವು ಗಂಟೆಗಳ ಮೊದಲು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಗುಪ್ತಾ ಅವರು ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದಾಗ ಅವರ ಮರಣದಂಡನೆಯನ್ನು ತಡೆಹಿಡಿಯಲಾಯಿತು.

ಡಿಸೆಂಬರ್ 16-17, 2012 ರ ಮಧ್ಯರಾತ್ರಿಯಲ್ಲಿ ಚಲಿಸುವ ಬಸ್‌ನಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯನ್ನು  ನಾಲ್ವರು ಅಪರಾಧಿಗಳು ಮತ್ತು ಇತರ ಇಬ್ಬರು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದರು.ಸಂತ್ರಸ್ಥ ಯುವತಿ ಮುಂದಿನ ಕೆಲ ದಿನಗಳ ನಂತರ ನಿಧನಳಾಗಿದ್ದಳು. ಈ ಪ್ರಕರಣದ ಓರ್ವ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ನೆ. ಆರೋಪಿಗಳ ಪೈಕಿ ಒಬ್ಬ ಬಾಲಾಪರಾಧಿಯನ್ನು ಬಾಲಾಪರಾಧಿ ನ್ಯಾಯ ಮಂಡಳಿ ಶಿಕ್ಷೆಗೊಳಪಡಿಸಿದೆ. ಮೂರು ವರ್ಷಗಳ ಅವಧಿ ನಂತರ ಆತನನ್ನು ರಿಮ್ಯಾಂಡ್ ಹೋಂ ನಿಂದ ಬಿಡುಗಡೆ ಂಆಡಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com