ಕೊರೋನಾವೈರಸ್: ಅರುಣಾಚಲ ಪ್ರದೇಶಕ್ಕೆ ವಿದೇಶಿಗರ ಪ್ರವೇಶ ನಿರ್ಬಂಧ

ಕೊರೋನಾವೈರಸ್ ಹಿನ್ನೆಲೆಯಲ್ಲಿ ವಿದೇಶಿಗರಿಗೆ ಕೊಡುವ ರಕ್ಷಿತ ಪ್ರದೇಶ ಅನುಮತಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಅರುಣಾಚಾಲ ಪ್ರದೇಶ ಸರ್ಕಾರ ನಿರ್ಧರಿಸಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಟಾನಗರ: ಕೊರೋನಾವೈರಸ್ ಹಿನ್ನೆಲೆಯಲ್ಲಿ ವಿದೇಶಿಗರಿಗೆ ಕೊಡುವ ರಕ್ಷಿತ ಪ್ರದೇಶ ಅನುಮತಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಅರುಣಾಚಾಲ ಪ್ರದೇಶ ಸರ್ಕಾರ ನಿರ್ಧರಿಸಿದೆ

ಚೀನಾದೊಂದಿಗೆ ಗಡಿಯೊಂದನ್ನು ಹಂಚಿಕೊಂಡಿರುವ ಅರುಣಾಚಲ ಪ್ರದೇಶ ಪ್ರವೇಶಕ್ಕೆ ವಿದೇಶಿಗರಿಗೆ ರಕ್ಷಿತ ಪ್ರದೇಶ ಅನುಮತಿ- ಪಿಎಪಿಗಳು ಅಗತ್ಯವಾಗಿದೆ.

ಮುಂದಿನ ಆದೇಶದವರೆಗೂ ಅನುಮತಿಯನ್ನು ನಿಲ್ಲಿಸುವಂತೆ ರಕ್ಷಿತ ಪ್ರದೇಶ ಅನುಮತಿ ನೀಡುತ್ತಿದ್ದ ಎಲ್ಲಾ ಆಡಳಿತ ಸಂಸ್ಥೆಗಳಿಗೆ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ನಿರ್ದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಂದ್-19 ಪಾಸಿಟಿವ್ ಪ್ರಕರಣಗಳು ಭಾರತದಲ್ಲಿ  ಹೆಚ್ಚಾಗುತ್ತಿರುವಂತೆ, ವಿದೇಶದಿಂದ ಭಾರತಕ್ಕೆ ಬರುತ್ತಿರುವವರಿಂದ ಇದಕ್ಕೆ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. 

ಅರುಣಾಚಲ ಪ್ರದೇಶದಲ್ಲಿ ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ರಕ್ಷಿತ ಪ್ರದೇಶ ಅನುಮತಿಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. ಸಿಕ್ಕಿಂನಲ್ಲಿ ವಿದೇಶಿಗರ ಭೇಟಿಯನ್ನು ರದ್ದುಡಿಸಿದ ನಂತರ ಅರುಣಾಲ ಪ್ರದೇಶ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com