2018-19ರಲ್ಲಿ 7 ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ 2513 ಕೋಟಿ ರೂ.ಹಣ: ಬಿಜೆಪಿಗೆ ಬಂದಿದ್ದೆಷ್ಟು ಗೊತ್ತೇ?

ರಾಷ್ಟ್ರೀಯ ರಾಜಕೀಯ ಪಕ್ಷಗಳು 2004ರಿಂದ 05ರವರೆಗೆ ಮತ್ತು 2018-19ರವರೆಗೆ ಅನಾಮಧೇಯ ಮೂಲಗಳಿಂದ 11,234.12 ಕೋಟಿ ರೂ. ಸಂದಾಯವಾಗಿದೆ ಎಂದು ವಿಶ್ಲೇಷಣೆಯೊಂದು ಬಹಿರಂಗಗೊಳಿಸಿದೆ. 
2018-19ರಲ್ಲಿ 7 ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ 2513 ಕೋಟಿ ರೂ.ಹಣ: ಬಿಜೆಪಿಗೆ ಬಂದಿದ್ದೆಷ್ಟು ಗೊತ್ತೇ?
2018-19ರಲ್ಲಿ 7 ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ 2513 ಕೋಟಿ ರೂ.ಹಣ: ಬಿಜೆಪಿಗೆ ಬಂದಿದ್ದೆಷ್ಟು ಗೊತ್ತೇ?

ನವದೆಹಲಿ: ರಾಷ್ಟ್ರೀಯ ರಾಜಕೀಯ ಪಕ್ಷಗಳು 2004ರಿಂದ 05ರವರೆಗೆ ಮತ್ತು 2018-19ರವರೆಗೆ ಅನಾಮಧೇಯ ಮೂಲಗಳಿಂದ 11,234.12 ಕೋಟಿ ರೂ. ಸಂದಾಯವಾಗಿದೆ ಎಂದು ವಿಶ್ಲೇಷಣೆಯೊಂದು ಬಹಿರಂಗಗೊಳಿಸಿದೆ. 

ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆದಾಯ ತೆರಿಗೆ ಮರುಪಾವತಿ ಹಾಗೂ ದೇಣಿಗೆಗಳ ಮಾಹಿತಿಯ ಆಧಾರದ ಮೇಲೆ ಥಿಂಕ್ ಟ್ಯಾಂಕ್ ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಈ ವರದಿ ತಯಾರಿಸಿದೆ. 

ಏಳು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ತೃಣಮೂಲಕ ಕಾಂಗ್ರೆಸ್, ಸಿಪಿಐ(ಎಂ), ಎನ್ ಸಿಪಿ, ಸಿಪಿಐ ಮತ್ತು ಬಿಎಸ್ ಪಿಗೆ 2018-19ನೇ ಆರ್ಥಿಕ ವರ್ಷದಲ್ಲಿ 3749.37 ಕೋಟಿ ರೂ. ಆದಾಯ ದಾಖಲಿಸಿವೆ. ಆದರೆ, ಈ ರಾಜಕೀಯ ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ 2512.98 ಕೋಟಿ ರೂ. ಸಂದಾಯವಾಗಿದೆ. ಚುನಾವಣಾ ಬಾಂಡ್ ಗಳಿಂದ 1960.68 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 

ಬಿಜೆಪಿ 2018-19ರಲ್ಲಿ ಅನಾಮಧೇಯ ಮೂಲಗಳಿಂದ 1612.04 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಪ್ರಕಟಿಸಿದೆ. ಈ ಆದಾಯ ಇತರ ಐದು ರಾಷ್ಟ್ರೀಯ ಪಕ್ಷಗಳಿಗಿಂತ 1.5 ಬಾರಿ ಹೆಚ್ಚಳವಾಗಿದೆ.  ಕಾಂಗ್ರೆಸ್ ಪಕ್ಷ 728.88 ಕೋಟಿ ರೂ. ಅನಾಮದೇಯ ಮೂಲಗಳ ಆದಾಯವನ್ನು ಪ್ರಕಟಿಸಿದೆ.  ಪಕ್ಷಗಳು ಚುನಾವಣಾ ಬಾಂಡ್ ಗಳಿಂದ ದೊರೆತ ಮೊತ್ತವನ್ನು ಪ್ರಕಟಿಸಬೇಕೆ ಹೊರತು ದೇಣಿಗೆ ನಿಡಿದವರ ಹೆಸರು ಬಹಿರಂಗಗೊಳಿಸಬೇಕಿಲ್ಲ. ಇದರಿಂದ ಶೇ. 67ರಷ್ಟು ಹಣ ಅನನಾಮಧೇಯ ಮೂಲಗಳದ್ದಾಗಿದೆ ಎಂದು ಎಡಿಆರ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com