ದೆಹಲಿ ವಿಧಾನಸಭೆಯಲ್ಲಿ ಎನ್ ಪಿಆರ್ ವಿರುದ್ಧ ನಿರ್ಣಯ 

ದೆಹಲಿ ವಿಧಾನಸಭೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. 
ದೆಹಲಿ ವಿಧಾನಸಭೆಯಲ್ಲಿ ಎನ್ ಪಿಆರ್ ವಿರುದ್ಧ ನಿರ್ಣಯ
ದೆಹಲಿ ವಿಧಾನಸಭೆಯಲ್ಲಿ ಎನ್ ಪಿಆರ್ ವಿರುದ್ಧ ನಿರ್ಣಯ

ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ದೇಶದ ಪ್ರತಿಯೊಬ್ಬ ನಿವಾಸಿಯ ಗುರುತಿನ ಸಮಗ್ರ ಡಾಟಾ ಬೇಸ್ ನಿರ್ಮಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎನ್ ಪಿಆರ್ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. 

ಈ ಕುರಿತು ನಿರ್ಣಯ ಮಂಡಿಸಿರುವ ದೆಹಲಿಯ ಪರಿಸರ ಖಾತೆ ಸಚಿವ ಗೋಪಾಲ್ ರಾಯ್, ದೆಹಲಿಯಲ್ಲಿ ಕೇಂದ್ರ ಸರ್ಕಾರದ ಎನ್ ಪಿಆರ್ ನ್ನು ಜಾರಿಗೊಳಿಸಬಾರದು, ಒಂದು ವೇಳೆ ಜಾರಿಗೊಳಿಸಿದ್ದೇ ಆದಲ್ಲಿ 2010 ರ ಕಾರ್ಯವಿಧಾನವನ್ನು ಬಳಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ಎನ್ ಸಿಆರ್ ಹಾಗೂ ಎನ್ ಪಿಆರ್ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಅದು ಬಹುಪಾಲು ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಈ ರೀತಿಯದ್ದು ಬ್ರಿಟೀಷ್ ಆಡಳಿತದಲ್ಲಿಯೂ ಜಾರಿಗೆ ಬಂದಿರಲಿಲ್ಲ. ಈ ಕಾಯ್ದೆಗಳು ಪ್ರತಿಯೊಬ್ಬ ನಾಗರಿಕನ ಪೌರತ್ವದ ಬಗ್ಗೆಯೂ ಪ್ರಶ್ನೆಗಳೇಳುವಂತೆ ಮಾಡಿದೆ ಎಂದು ಹೇಳಿದ್ದಾರೆ. 

ದೆಹಲಿಯಲ್ಲಿ ಕೊರೋನಾ ವೈರಸ್ ಪರಿಸ್ಥಿತಿ, ಎನ್ ಆರ್ ಸಿ-ಎನ್ ಪಿಆರ್ ಬಗ್ಗೆ ಚರ್ಚಿಸುವುದಕ್ಕಾಗಿಯೇ ಒಂದು ದಿನದ ಮಟ್ಟಿಗೆ ವಿಶೇಷ ಅಧಿವೇಶನ ಕರೆಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com