ಕೊರೊನಾ ವೈರಸ್ ವಿಷಯದಲ್ಲಿ ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ: ಡಾ ಹರ್ಷವರ್ಧನ್ ಆರೋಪ 

ಕೊರೊನಾ ವೈರಾಣು ಸೋಂಕಿನ ಈ ಕಠಿಣ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಇಡೀ ದೇಶ ಒಟ್ಟಾಗಿ ನಿಂತಿರುವಾಗ ರಾಹುಲ್ ಗಾಂಧಿ ಮಾತ್ರ ಇದರಲ್ಲೂ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಆರೋಪಿಸಿದ್ದಾರೆ.
ಕೊರೊನಾ ವೈರಸ್ ವಿಷಯದಲ್ಲಿ ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ: ಡಾ ಹರ್ಷವರ್ಧನ್ ಆರೋಪ 
Updated on

ನವದೆಹಲಿ: ಕೊರೊನಾ ವೈರಾಣು ಸೋಂಕಿನ ಈ ಕಠಿಣ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಇಡೀ ದೇಶ ಒಟ್ಟಾಗಿ ನಿಂತಿರುವಾಗ ರಾಹುಲ್ ಗಾಂಧಿ ಮಾತ್ರ ಇದರಲ್ಲೂ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಆರೋಪಿಸಿದ್ದಾರೆ.


ರಾಹುಲ್ ಗಾಂಧಿಯವರ ವಿರುದ್ಧ ತಿರುಗೇಟು ನೀಡುವಂತೆ ವಿಡಿಯೊವನ್ನು ಶೇರ್ ಮಾಡಿರುವ ಅವರು,ಕೊವಿಡ್ 19 ಸೋಂಕು ತಡೆಗೆ ಮತ್ತು ಮುನ್ನೆಚ್ಚರಿಕೆಗೆ ಭಾರತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಇಡೀ ದೇಶ ಒಟ್ಟಾಗಿ ನಿಂತಿದೆ. ಆದರೆ ರಾಹುಲ್ ಗಾಂಧಿಯವರು ಮಾತ್ರ ರಾಜಕೀಯ ಮಾಡುತ್ತಿದ್ದು ಜನರಲ್ಲಿ ನಿರಾಶೆ ತುಂಬುತ್ತಿದ್ದಾರೆ ಎಂದು ಹೇಳಿದ್ದಾರೆ.


ರಾಹುಲ್ ಗಾಂಧಿಯವರು, ಆರ್ಥಿಕತೆಯೇ ಭಾರತದ ಶಕ್ತಿ, ಆದರೆ ನರೇಂದ್ರ ಮೋದಿಯವರು ತತ್ವ, ನೀತಿ, ಯೋಜನೆಗಳಿಂದ ಆರ್ಥಿಕ ಪರಿಸ್ಥಿತಿ ನಾಶವಾಗುತ್ತಿದೆ. ಕೊರೊನಾ ವೈರಸ್ ಸಮಸ್ಯೆ ಗಂಭೀರವಾಗಿದ್ದರೂ ಕೂಡ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಸರಿಯಾಗಿ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com