ಪ. ಬಂಗಾಳ: ಕೊರೋನಾ ವೈರಸ್ ಗೆ ಔಷಧಿಯಾಗಿ ಸಗಣಿ, ಗೋವಿನ ಮೂತ್ರ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ 20 ಕಿ.ಮೀ ದೂರದಲ್ಲಿರುವ ಹೂಗ್ಲಿ ಜಿಲ್ಲೆಯ ಡಾಂಕುನಿ ಎಂಬಲ್ಲಿ ರಸ್ತೆಬದಿಯ ಅಂಗಡಿಯಲ್ಲಿ ಕೊರೋನಾ ವೈರಸ್ ಗೆ ಔಷಧಿಯಾಗಿ ಸಗಣಿ ಮತ್ತು ಗೋವಿನ ಮೂತ್ರವನ್ನು ಮಾರಾಟ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ 20 ಕಿ.ಮೀ ದೂರದಲ್ಲಿರುವ ಹೂಗ್ಲಿ ಜಿಲ್ಲೆಯ ಡಾಂಕುನಿ ಎಂಬಲ್ಲಿ ರಸ್ತೆಬದಿಯ ಅಂಗಡಿಯಲ್ಲಿ ಕೊರೋನಾ ವೈರಸ್ ಗೆ ಔಷಧಿಯಾಗಿ ಸಗಣಿ ಮತ್ತು ಗೋವಿನ ಮೂತ್ರವನ್ನು ಮಾರಾಟ ಮಾಡುತ್ತಿದ್ದ ಹಾಲಿನ ವ್ಯಾಪಾರಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಜನತೆಗೆ ಮೋಸ ಮಾಡಿದ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಮಬುದ್ ಅಲಿ ಎಂಬುವವರನ್ನು ಹೂಗ್ಲಿ ಪೊಲೀಸರು ಬಂಧಿಸಿದ್ದಾರೆ.

ಅಲಿ, ಸಗಣಿ ಮತ್ತು ಗೋವಿನ ಮೂತ್ರ ಸೇವಿಸಿದರೆ ಕೊರೋನಾ ವೈರಸ್ ಸೋಂಕು ನಿವಾರಣೆಯಾಗುತ್ತದೆ ಎಂದು ಜನರನ್ನು ನಂಬಿಸಿ ನಿನ್ನೆಯಿಂದ ರಸ್ತೆಯಲ್ಲಿ ಅದನ್ನು ಮಾರಾಟ ಮಾಡುತ್ತಿದ್ದನ್ನು. ಹಿಂದೂ ಮಹಾಸಭಾ ದೆಹಲಿಯಲ್ಲಿ ನಡೆಸಿದ ಗೋಮೂತ್ರ ಕಾರ್ಯಕ್ರಮದಿಂದ ಪ್ರೇರಿತನಾಗಿ ಸಗಣಿ ಮತ್ತು ಗೋಮೂತ್ರ ಮಾರುತ್ತಿರುವುದಾಗಿ ಅಲಿ ಹೇಳಿದ್ದಾರೆ.

ಅಲಿ, 500 ರೂಪಾಯಿಗೆ ಒಂದು ಲೀಟರ್ ಗೋಮೂತ್ರ ಮತ್ತು 500 ರೂಪಾಯಿಗೆ 1 ಕೆ.ಜಿ. ಸಗಣಿ ಮಾರಾಟ ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com