ನಾನು ಪ್ರತ್ಯೇಕ ವಾಸಿಸುವುದನ್ನು ನೋಡಿ ನಕ್ಕವರು ಇಂದು ಕೊರೋನಾ ಭಯಕ್ಕೆ ಬೇರೆ ಇರಲು ನೋಡುತ್ತಿದ್ದಾರೆ: ನಿತ್ಯಾನಂದ 

ವಿಲಕ್ಷಣ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಾಗುವ ಸ್ವಘೋಷಿತ ದೇವಮಾನವ ನಿತ್ಯಾನಂದ ಇದೀಗ ಕೊರೋನಾ ವೈರಸ್ ಬಗ್ಗೆ ಕೂಡ ಮಾತನಾಡಿದ್ದಾನೆ. 
ನಾನು ಪ್ರತ್ಯೇಕ ವಾಸಿಸುವುದನ್ನು ನೋಡಿ ನಕ್ಕವರು ಇಂದು ಕೊರೋನಾ ಭಯಕ್ಕೆ ಬೇರೆ ಇರಲು ನೋಡುತ್ತಿದ್ದಾರೆ: ನಿತ್ಯಾನಂದ 

ನವದೆಹಲಿ: ವಿಲಕ್ಷಣ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಾಗುವ ಸ್ವಘೋಷಿತ ದೇವಮಾನವ ನಿತ್ಯಾನಂದ ಇದೀಗ ಕೊರೋನಾ ವೈರಸ್ ಬಗ್ಗೆ ಕೂಡ ಮಾತನಾಡಿದ್ದಾನೆ. 


ಅಂದು ತಾನು ಸ್ವಯಂ ಪ್ರತ್ಯೇಕತೆಯಿಂದ ಬೇರೆಯ ದೇಶ ಸೃಷ್ಟಿಸಿ ವಾಸಿಸಲು ಆರಂಭಿಸಿದಾಗ ನನ್ನನ್ನು ಅಪಹಾಸ್ಯ ಮಾಡಿ ನಕ್ಕವರು ಇಂದು ಕೊರೋನಾ ವೈರಸ್ ನ ಭೀತಿಯಿಂದ ಪಾರಾಗಲು ಪ್ರತ್ಯೇಕವಾಗಿ ವಾಸಿಸಲು ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ನಿತ್ಯಾನಂದ ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.


ಭಾರತದಲ್ಲಿರುವ ತನ್ನ ಆಶ್ರಮದಲ್ಲಿ ಶಿಷ್ಯೆಯರಿಗೆ ಕಿರುಕುಳ ಮತ್ತು ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಕಳೆದ ಡಿಸೆಂಬರ್ ನಲ್ಲಿ ಈಕ್ವೆಡಾರ್ ನಿಂದ ಒಂದು ದ್ವೀಪವನ್ನು ಖರೀದಿಸಿ ಅಲ್ಲಿ ಹೊಸ ದೇಶ ಕಟ್ಟಿಸಿ ಕೈಲಾಸ ಎಂದು ಹೆಸರನ್ನಿಟ್ಟು ಅದನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ ಆ ದೇಶಕ್ಕೆ ಪ್ರತ್ಯೇಕ ಧ್ವಜ, ರಾಷ್ಟ್ರಗೀತೆ ಮತ್ತು ಪಾಸ್ ಪೋರ್ಟ್ ಹೊಂದಿದ್ದಾನೆ ಎಂದು ಸುದ್ದಿಯಾಗಿತ್ತು. 


ಇದೀಗ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಸಮಸ್ಯೆ ಬಗ್ಗೆ ನಿತ್ಯಾನಂದ ಮಾತನಾಡಿದ್ದು ಅದರಲ್ಲಿ, ನಾನು ಹೊಸ ದೇಶ ಕೈಲಾಸವನ್ನು ಕಟ್ಟಿದಾಗ ಹಲವು ಭಾರತೀಯರು ನನ್ನನ್ನು ಗೇಲಿ ಮಾಡಿದರು, ಇಂದು ಇಡೀ ಜಗತ್ತಿನಲ್ಲಿ ಜನರು ಕೊರೋನಾ ಭಯಕ್ಕೆ ಒಬ್ಬರಿಗೊಬ್ಬರು ಪ್ರತ್ಯೇಕವಾಗಿ ವಾಸಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಪರಮಶಿವ ದೇವರು ನಮ್ಮನ್ನು ಕಾಪಾಡಿದ್ದಾರೆ. ಇದು ದೇವರ ಶಕ್ತಿ ಎಂದು ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com