ಘಟನೆ ನಡೆದ ದಿನ ನಾನು ದೆಹಲಿಯಲ್ಲೇ ಇರ್ಲಿಲ್ಲ: ನೇಣುಗಂಬಕ್ಕೇರಲು 3 ದಿನವಿರುವಾಗ ನಿರ್ಭಯಾ ಅಪರಾಧಿಯ ಹೊಸ ವರಸೆ

ಆಘಾತಕಾರಿ ಬೆಳವಣಿಗೆಯಲ್ಲಿ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ತಾನು ಘಟನೆ ನಡೆದ ದಿನ (ಡಿಸೆಂಬರ್ 16 2012) ರಂದು ದೆಹಲಿಯಲ್ಲಿ ಇರಲೇ ಇಲ್ಲ ಹಾಗಾಗಿ ತನಗೆ ವಿಧಿಸಲಾಗಿರುವ ಮರಣದಂಡನೆಯನ್ನು ರದ್ದುಗೊಳಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾನೆ. ನಾಲ್ವರು ಅಪರಾಧಿಗಳಿಗೆ ನೇಣುಗಂಬವೇರಲು
ಮುಖೇಶ್ ಸಿಂಗ್
ಮುಖೇಶ್ ಸಿಂಗ್
Updated on

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ತಾನು ಘಟನೆ ನಡೆದ ದಿನ (ಡಿಸೆಂಬರ್ 16 2012) ರಂದು ದೆಹಲಿಯಲ್ಲಿ ಇರಲೇ ಇಲ್ಲ ಹಾಗಾಗಿ ತನಗೆ ವಿಧಿಸಲಾಗಿರುವ ಮರಣದಂಡನೆಯನ್ನು ರದ್ದುಗೊಳಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾನೆ. ನಾಲ್ವರು ಅಪರಾಧಿಗಳಿಗೆ ನೇಣುಗಂಬವೇರಲು ಇನ್ನೇನು ಮೂರು ದಿನಗಳಷ್ಟೇ ಬಾಕಿ ರುವ ಈ ಸಮಯದಲ್ಲಿ ಅಪರಾಧಿ ತಾನು ಸ್ಥಳದಲ್ಲಿರಲಿಲ್ಲ ಎನ್ನುವ ಮೂಲಕ ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಡುತ್ತಿರುವುದು ಅಚ್ಚರಿಯಾಗಿದೆ.

ತನ್ನ ವಾದವನ್ನು ಬೆಂಬಲಿಸಿ ಮುಖೇಶ್ ತನ್ನನ್ನು ರಾಜಸ್ಥಾನದಲ್ಲಿ ಬಂಧಿಸಲಾಯಿತು.ಹಾಗೂ ಘಟನೆ ನಡೆದ ದಿನದ ನಂತರ ಎಂದರೆ ರ 2012 ರ ಡಿಸೆಂಬರ್ 17 ರಂದು ದೆಹಲಿಗೆ ಕರೆತಂದರು ಎಂದು ಹೇಳಿದ್ದಾನೆ.

ಇಷ್ಟಲ್ಲದೆ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ನನಗೆ ಚಿತ್ರಹಿಂಸೆ ನೀಡಲಾಗಿದೆ. ಎಂದು ಅವರು ಹೇಳಿದ್ದಾರೆ. ಮುಖೇಶ್ ಪರ  ವಕೀಲ ಎಂ.ಎಲ್. ಶರ್ಮ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇದಲ್ಲದೆ, ಪ್ರಕರಣದ ಇತರ ಮೂವರು ಮರಣದಂಡನೆ ಶಿಕ್ಷೆಗೊಳಗಾಗಿರುವ ಅಪರಾಧಿಗಳಾದ ಅಕ್ಷಯ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಮಾರ್ಚ್ 16 ರಂದು ಅಂತರರಾಷ್ಟ್ರೀಯ ನ್ಯಾಯಾಲಯವನ್ನು (ಐಸಿಜೆ) ಸಂಪರ್ಕಿಸಿ, ಅವರ ಮರಣದಂಡನೆಯನ್ನು ತಡೆಹಿಡಿಯುವಂತೆ ಕೋರಿದ್ದಾರೆ.

ಅಂತರರಾಷ್ಟ್ರೀಯ ನ್ಯಾಯಾಲಯವು ವಿಶ್ವಸಂಸ್ಥೆಯ ಪ್ರಮುಖ ನ್ಯಾಯಾಂಗ ಅಂಗವಾಗಿದೆ.

ವಿನಯ್, ಅಕ್ಷಯ್, ಮುಖೇಶ್, ಮತ್ತು ಪವನ್ ಎಂಬ ನಾಲ್ವರು ಅಪರಾಧಿಗಳನ್ನು ಮಾರ್ಚ್ 20 ರಂದು ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com