ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊವಿಡ್-19 ಪರೀಕ್ಷೆಗೆ ಅನುಮತಿ ಪಡೆದ ಮೊದಲ ಖಾಸಗಿ ಸಂಸ್ಥೆ ರಾಶ್ ಡಯಾಗ್ನೋಸ್ಟಿಕ್

ಸ್ವಿಸ್ ಮೂಲದ ಖಾಸಗಿ ಪ್ರಯೋಗಾಲಯ, ರಾಶ್ ಡಯಾಗ್ನೋಸ್ಟಿಕ್ಸ್ ಇಂಡಿಯಾ ಮಹಾಮಾರಿ ಕೊರೋನಾ ವೈರಸ್ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದೆ.

ನವದೆಹಲಿ: ಸ್ವಿಸ್ ಮೂಲದ ಖಾಸಗಿ ಪ್ರಯೋಗಾಲಯ, ರಾಶ್ ಡಯಾಗ್ನೋಸ್ಟಿಕ್ಸ್ ಇಂಡಿಯಾ ಮಹಾಮಾರಿ ಕೊರೋನಾ ವೈರಸ್ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದೆ. ಈ ಮೂಲಕ ಕೊವಿಡ್-19 ಪರೀಕ್ಷೆಗೆ ಅನುಮತಿ ಪಡೆದ ಮೊದಲ ಖಾಸಗಿ ಸಂಸ್ಥೆಯಾಗಿದೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಹಿರಿಯ ಅಧಿಕಾರಿಗಳ ಪ್ರಕಾರ, ಡಿಸಿಜಿಐ ಕೊರೋನಾ ವೈರಸ್ ಪರೀಕ್ಷೆಗಾಗಿ ಈಗ ರಾಶ್ ಡಯಾಗ್ನೋಸ್ಟಿಕ್ ಅನುಮತಿ ನೀಡಿದ್ದು, ಅನುಮತಿ ಕೋರಿರುವ ಮತ್ತೊಂದು ಖಾಸಗಿ ಡಯಾಗ್ನೋಸ್ಟಿಕ್ ಬಯೋ ಮೆರಿಯೂಗೂ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಎರಡು ಭಾರತೀಯ ಮೂಲದ ಡಯಾಗ್ನೋಸ್ಟಿಕ್ ಗಳಾದ ಟ್ರಿವಿಟ್ರಾನ್ ಹೆಲ್ತ್‌ಕೇರ್ ಮತ್ತು ಮೈಲಾಬ್ ಡಿಸ್ಕವರಿ ಸೊಲ್ಯುಷನ್ ಸಹ ಅನುಮತಿ ಕೇಳಿ ಡಿಸಿಜಿಐ ಗೆ ಅರ್ಜಿ ಸಲ್ಲಿಸಿವೆ ಎಂದು ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಕೇಂದ್ರ ಆರೋಗ್ಯ ಸಚಿವಾಲಯ, COVID-19 ಪರೀಕ್ಷೆಯನ್ನು ಪ್ರಾರಂಭಿಸಲು ಉದ್ದೇಶಿಸಿರುವ ಖಾಸಗಿ ವಲಯದ ಪ್ರಯೋಗಾಲಯಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪರೀಕ್ಷೆಗಳನ್ನು ಉಚಿತವಾಗಿ ನಡೆಸುವಂತೆ ಮನವಿ ಮಾಡಿದೆ.

Related Stories

No stories found.

Advertisement

X
Kannada Prabha
www.kannadaprabha.com