ಗಲ್ಲು ಶಿಕ್ಷೆಗೆ ಕೆಲ ತಾಸುಗಳು ಇರುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಿರ್ಭಯಾ ಹಂತಕರು

ದೇಶಾದ್ಯಂತ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಗುರಿಯಾಗಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅತ್ಯಾಚಾರಿಗಳು ಈಗ ಕೊನೆ ಹೋರಾಟ ಎಂಬಂತೆ  ಗಲ್ಲು ಶಿಕ್ಷೆಗೆ ಕೆಲ ತಾಸುಗಳು ಬಾಕಿ ಇರುವಂತೆ  ದಿಲ್ಲಿ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.
ನಿರ್ಭಯಾ ಹಂತಕರು
ನಿರ್ಭಯಾ ಹಂತಕರು
Updated on

ಹೊಸದಿಲ್ಲಿ: ದೇಶಾದ್ಯಂತ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಗುರಿಯಾಗಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅತ್ಯಾಚಾರಿಗಳು ಈಗ ಕೊನೆ ಹೋರಾಟ ಎಂಬಂತೆ  ಗಲ್ಲು ಶಿಕ್ಷೆಗೆ ಕೆಲ ತಾಸುಗಳು ಬಾಕಿ ಇರುವಂತೆ  ದಿಲ್ಲಿ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.

ಶುಕ್ರವಾರ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಹಂತಕರಾದ ಅಕ್ಷಯ್ ಕುಮಾರ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ  ದಿಲ್ಲಿಯ ಪಟಿಯಾಲಾ ಕೋರ್ಟ್‌ಗೆ ಹಂತಕರು ಮೊರೆ ಹೋಗಿದ್ದರು. ಆದರೆ ಪಟಿಯಾಲಾ ಕೋರ್ಟ್‌, ಹಂತಕರ ಅರ್ಜಿಯನ್ನು ವಜಾಗೊಳಿಸಿತು. ಇದರೊಂದಿಗೆ ಗಲ್ಲು ಶಿಕ್ಷೆಗೆ ಫಿಕ್ಸ್ ಆಗಿತ್ತು.

ಮುಕೇಶ್ ಸಿಂಗ್ ಜೊತೆಗೆ ಈ ಆರೋಪಿಗಳಿಗೆ ನಾಳೆ ಬೆಳಗ್ಗೆ 5-30ಕ್ಕೆ ಗಲ್ಲಿಗೆ ಹಾಕಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com