ಕೊನೆಗೂ ನ್ಯಾಯ ದೊರಕಿದೆ- ನಿರ್ಭಯಾ ಪೋಷಕರ ಸಂತಸ

ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದ್ದು, ಕೊನೆಗೂ ನ್ಯಾಯ ದೊರಕಿದೆ ಎಂದು ನಿರ್ಭಯಾ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ
ಆಶಾದೇವಿ
ಆಶಾದೇವಿ

ನವದೆಹಲಿ:  ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದ್ದು, ಕೊನೆಗೂ ನ್ಯಾಯ ದೊರಕಿದೆ ಎಂದು ನಿರ್ಭಯಾ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ

ನಿರ್ಭಯಾಳಿಗೆ ನ್ಯಾಯ ಸಿಕ್ಕಿದೆ. ನ್ಯಾಯದಾನ ವಿಳಂಬವಾಗಿದೆ. ಆದರೂ ನ್ಯಾಯ ಸಿಕ್ಕಿದೆ. ನನ್ನ ಮಗಳ ಬಗ್ಗೆ ಹೆಮ್ಮೆ ಇದೆ.  ಇಂದು ದೇಶಕ್ಕೆ ನ್ಯಾಯ ಸಿಕ್ಕಿದೆ. ಈ ದಿನವನ್ನು ದೇಶದ ಹೆಣ್ಣುಮಕ್ಕಳಿಗೆ ಆರ್ಪಿಸುವುದಾಗಿ  ನಿರ್ಭಯಾ ತಾಯಿ ಆಶಾ ದೇವಿ ಸುದ್ದಿಗಾರರಿಗೆ ತಿಳಿಸಿದರು.

ನನ್ನ ಮಗಳು ಸತ್ತಿಲ್ಲ ಮತ್ತು ಬರುವುದು ಇಲ್ಲ. ನಮ್ಮನ್ನು ಆಕೆ ಅಗಲಿದ ನಂತರ ಈ ಹೋರಾಟವನ್ನು ಆರಂಭಿಸಲಾಯಿತು. ನಿರ್ಭಯಾಳಿಗಾಗಿ ಆರಂಭಿಸಿದ ಹೋರಾಟವನ್ನು ದೇಶದ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಮುಂದುವರೆಸಲಾಗುವುದು ಎಂದು ಆಶಾದೇವಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com