ಕೊರೋನಾ ವೈರಸ್ ಭೀತಿ: ಮಾ.31ರವರೆಗೆ ಎಲ್ಲಾ ಪ್ರಯಾಣಿಕ ರೈಲು ಸಂಚಾರ ರದ್ದು

ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಎಲ್ಲಾ ರೈಲುಗಳ ಸಂಚಾರವನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ.
ಕೊರೋನಾ ವೈರಸ್ ಭೀತಿ: ಮಾ.31ರವರೆಗೆ ಎಲ್ಲಾ ಪ್ರಯಾಣಿಕ ರೈಲು ಸಂಚಾರ ರದ್ದು

ನವದೆಹಲಿ:ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಎಲ್ಲಾ ರೈಲುಗಳ ಸಂಚಾರವನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ.

ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಕೇವಲ ಗೂಡ್ಸ್ ರೈಲುಗಳು ಮಾತ್ರ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ರೈಲ್ವೆ ಮಂಡಳಿ ಪ್ರಯಾಣಿಕ ರೈಲು ಸಂಚಾರ ಸೇವೆಯನ್ನು ಸ್ಥಗಿತಗೊಳಿಸಿದೆ. ಕೇವಲ ಗೂಡ್ಸ್ ರೈಲು ಸಂಚರಿಸಲಿದೆ. ಉಪನಗರ ರೈಲುಗಳು ಮತ್ತು ಕೋಲ್ಕತ್ತಾ ಮೆಟ್ರೊ ಸೇವೆಗಳು ಇಂದು ಮಧ್ಯರಾತ್ರಿಯವರೆಗೆ ಸಂಚರಿಸಲಿವೆ. ಕಳೆದ ಮಾರ್ಚ್ 13ರಂದು ಮತ್ತು 16ರಂದು ರೈಲುಗಳಲ್ಲಿ ಸಂಚರಿಸಿದ 12 ಪ್ರಯಾಣಿಕರಲ್ಲಿ ಕೊರೋನಾ ವೈರಸ್ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿದೆ. 

ಮಾರ್ಚ್ 31ರವರೆಗೆ ರೈಲು ರಾಜ್ಯಕ್ಕೆ ಬರಲು ಬಿಡಬೇಡಿ ಎಂದು ಜಾರ್ಖಂಡ್ ಸರ್ಕಾರ ರೈಲ್ವೆ ಮಂಡಳಿಗೆ ಪತ್ರ ಬರೆದಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com