ಸಹೋದರನನ್ನು ಬಾವಿಗೆ ತಳ್ಳಿ ಯುವತಿ ಮೇಲೆ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಭೋಪಾಲ್: ಸಹೋದರನನ್ನು ಬಾವಿಗೆ ತಳ್ಳಿ ಹದಿನೆಂಟು ವರ್ಷದ ಯುವತಿ ಮೇಲೆ ಅಪ್ರಾಪ್ತ ಬಾಲಕ ಸೇರಿ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ

ಆಕೆ ತನ್ನ ಸಹೋದರನ ಜೊತೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಏಪ್ರಿಲ್ 29-30ರಂದು ಈ ಘಟನೆ ನಡೆದಿದ್ದು, ಅತ್ಯಾಚಾರಕ್ಕೂ ಮುನ್ನ ಆಕೆಯ ಸಹೋದರನನ್ನು  ಬಾವಿಗೆ ತಳ್ಳಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಮೂರು ಅಪ್ರಾಪ್ತ ಬಾಲಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಕಣ್ಮರೆಯಾಗಿದ್ದಾರೆ. ಯುವತಿ ತನ್ನ ಸಹೋದರನ ಜೊತೆಗೆ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಳು. ರಾತ್ರಿ 8.30ರ ಸುಮಾರಿಗೆ ಬೈಕ್‌ ತಡೆದು ನಿಲ್ಲಿಸಿದ ಆರೋಪಿಗಳು ಆಕೆಯ ಸಹೋದರನನ್ನು ತಳ್ಳಿ ಆಕೆಯನ್ನು ಎಳೆದುಕೊಂಡು ಹೋಗಿದ್ದರು. ಮಧ್ಯರಾತ್ರಿ 2 ಗಂಟೆಯವರೆಗೂ  ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರಿಗಳು ಆಕೆಯನ್ನು ಅಲ್ಲಿಯೇ ಬಿಟ್ಟು ಓಡಿ ಹೋದ ಬಳಿಕ ಆಕೆ ಬಾವಿಗೆ ಬಿದ್ದಿದ್ದ ತನ್ನ ಸಹೋದರನನ್ನು ರಕ್ಷಣೆ ಮಾಡಿದ್ದಾಳೆ. ಬಳಿಕ ಮನೆಗೆ ತೆರಳಿ ಮರುದಿನ ಬೆಳಗ್ಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆವರನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com