ಕೊವಿಡ್-19: ಕಾಶ್ಮೀರ ಕಣಿವೆಯ ಎಲ್ಲಾ 10 ಜಿಲ್ಲೆಗಳು ರೆಡ್ ಜೋನ್: ರಾಜ್ಯಾಡಳಿತ ಘೊಷಣೆ

ಕಾಶ್ಮೀರ ಕಣಿವೆಯ ಕೇವಲ ನಾಲ್ಕು ಜಿಲ್ಲೆಗಳು ಕೆಂಪು ವಲಯಗಳೆಂದು ಕೇಂದ್ರ ಆರೋಗ್ಯ ಸಚಿವಾಲಯ ವರ್ಗೀಕರಿಸಿದ್ದರೂ ಸಹ ರಾಜ್ಯ ಆಡಳಿತಗಳು ಇಡೀ ಕಾಶ್ಮೀರ ಕಣಿವೆಯನ್ನು ಕೆಂಪು ವಲಯಗಳಾಗಿ ಪರಿಗಣಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕಾಶ್ಮೀರ ಕಣಿವೆಯ ಕೇವಲ ನಾಲ್ಕು ಜಿಲ್ಲೆಗಳು ಕೆಂಪು ವಲಯಗಳೆಂದು ಕೇಂದ್ರ ಆರೋಗ್ಯ ಸಚಿವಾಲಯ ವರ್ಗೀಕರಿಸಿದ್ದರೂ ಸಹ ರಾಜ್ಯ ಆಡಳಿತ ಇಡೀ ಕಾಶ್ಮೀರ ಕಣಿವೆಯನ್ನು ಕೆಂಪು ವಲಯಗಳಾಗಿ ಪರಿಗಣಿಸಿವೆ.

ಇದರಿಂದ ಇಡೀ ಕಣಿವೆಯಲ್ಲಿ ನಿರ್ಬಂಧಗಳಲ್ಲಿ ಸಡಿಲಿಕೆ ಇರುವುದಿಲ್ಲ. ಲಾಕ್‌ಡೌನ್ ಅವಧಿಯನ್ನು ಇನ್ನೂ ಎರಡು ವಾರ ವಿಸ್ತರಿಸಿ, ಹಸಿರು ವಲಯಗಳಲ್ಲಿ ಹೆಚ್ಚಿನ ಕಾರ್ಯಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಮುಂದಿನ ಆದೇಶ ಬರುವವರೆಗೆ ಕಾಶ್ಮೀರ ಕಣಿವೆಯ ಎಲ್ಲ 10 ಜಿಲ್ಲೆಗಳನ್ನು ಕೆಂಪು ವಲಯಗಳಾಗಿ ಪರಿಗಣಿಸಲಾಗಿದೆ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ಪಿ.ಕೆ.ಪೊಲೆ ಯುಎನ್‌ಐಗೆ ತಿಳಿಸಿದ್ದಾರೆ. 

ಕೊವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳು ಕೆಂಪು ವಲಯಗಳಾಗಿ ಘೋಷಿಸುವ ಇಂತಹ ಕ್ರಮಗಳು ಅಗತ್ಯವಾಗಿದೆ. ಕಣಿವೆಯಿಂದ ಹೊರಗಿರುವ ಕಾಶ್ಮೀರಿ ಜನರು ವಾಪಸ್ ಬರುವ ಹಿನ್ನೆಲೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕಾಗಿದೆ. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ ಕಾಶ್ಮೀರ ಕಣಿವೆಯಲ್ಲಿ ಕೇವಲ ಪುಲ್ವಾಮ ಜಿಲ್ಲೆ ಹಸಿರು ವಲಯವಾಗಿತ್ತು. ಆದರೆ, ಈ ಜಿಲ್ಲೆಯಲ್ಲೂ ಕೊವಿಡ್-19 ಪ್ರಕರಣಗಳು ವರದಿಯಾಗಿವೆ. ಪುಲ್ವಾಮ ಜಿಲ್ಲೆಯಲ್ಲಿ ಸದ್ಯ ನಾಲ್ಕು ಸಕ್ರಿಯ ಪ್ರಕರಣಗಳಿವೆ ಎಂದು ಅವರು ಪಿ.ಕೆ.ಪೊಲೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com