
ನವದೆಹಲಿ: ಕೊವಿಡ್-19 ಲಾಕ್ ಡೌನ್ ಅಂತ್ಯವಾದ ನಂತರ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರ ಮೂಲಕ ವಾಣಿಜ್ಯ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು ಭಾನುವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಯಾಣಕರನ್ನು ಮತ್ತು ಅವರ ಬ್ಯಾಗ್ ಗಳನ್ನು ಡಿಸ್ ಇನ್ಫೆಕ್ಷನ್ ಮಾಡಲು ಟನಲ್ ಗಳನ್ನು ನಿರ್ಮಿಸಲಾಗುವುದು. ವಿಮಾನಯಾನ ಸಂಸ್ಥೆಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳನ್ನು ನಿಗದಿಪಡಿಸಲಾಗಿದೆ. ಜನದಟ್ಟಣೆಯಾಗದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ವಿಸ್ತಾರ ಮತ್ತು ಇಂಡಿಗೋ ಪ್ರಯಾಣಿಕರು ಗೇಟ್ ನಂಬರ್ 1 ಮತ್ತು 2ರ ಮೂಲಕ ಮಾತ್ರ ಪ್ರವೇಶಿಸಬೇಕು. ಏರ್ ಏಷ್ಯಾ ಇಂಡಿಯಾ ಮತ್ತು ಏರ್ ಇಂಡಿಯಾ ಪ್ರಯಾಣಿಕರಿಗೆ ಗೇಟ್ 3 ಮತ್ತು ಗೇಟ್ 4 ನಿಗದಿಪಡಿಸಲಾಗಿದೆ. ಸ್ಪೈಸ್ ಜೆಟ್ ಮತ್ತು ಗೋ ಏರ್ ಪ್ರಯಾಣಿಕರು ಗೇಟ್ 5 ರ ಮೂಲಕ ಪ್ರವೇಶಿಸಬೇಕು ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಅಂತರಾಷ್ಟ್ರೀಯ ವಿಮಾನಯಾನ ಪ್ರಯಾಣಿಕರು ಗೇಟ್ ನಂಬರ್ 6, 7 ಮತ್ತು 8 ರ ಮೂಲಕ ಪ್ರವೇಶಿಸಬೇಕು ಎಂದು ಅವರು ಹೇಳಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಅಂದಿನಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ. ಈಗ ಮೇ 17ರ ನಂತರ ಲಾಕ್ ಡೌನ್ ತೆರವುಗೊಳಿಸುವ ನಿರೀಕ್ಷೆಯಲ್ಲಿರುವ ವಿಮಾನ ನಿಲ್ದಾಣಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಪ್ರಯಾಣಿಕರನ್ನು ಡಿಸ್ ಇನ್ಫೆಕ್ಷನ್ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿವೆ.
Advertisement