ಸಾಂದರ್ಭಿಕ ಚಿತ್ರ
ದೇಶ
ಬಿಎಸ್ ಎಫ್ ಸಿಬ್ಬಂದಿಗೆ ಕೊರೋನಾ: ದೆಹಲಿ ಕೇಂದ್ರ ಕಚೇರಿಯ ಎರಡು ಮಹಡಿ ಸೀಲ್ ಡೌನ್
ದೆಹಲಿಯಲ್ಲಿರುವ ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯ ಎರಡು ಮಹಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ನವದೆಹಲಿ: ದೆಹಲಿಯಲ್ಲಿರುವ ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯ ಎರಡು ಮಹಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಎಂಟು ಮಹಡಿಯ ಬಿಎಸ್ ಎಫ್ ಕೇಂದ್ರ ಕಚೇರಿ ದೆಹಲಿಯ ಲೋಧಿ ರಸ್ತೆಯ ಸಿಜಿಒ ಕಾಂಪ್ಲೆಕ್ಸ್ ನಲ್ಲಿದೆ. ಇಲ್ಲಿಯೇ ಸಿಆರ್ ಪಿಎಫ್ ನ ಕೇಂದ್ರ ಕಚೇರಿ ಸಹ ಇದ್ದು ಇಲ್ಲಿನ ಇಬ್ಬರು ಸಿಬ್ಬಂದಿಯಲ್ಲಿ ಕೊರೋನಾ ಕಾಣಿಸಿಕೊಂಡು ನಿನ್ನೆ ಸೀಲ್ ಡೌನ್ ಮಾಡಲಾಗಿತ್ತು.
ಕಚೇರಿಯ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಕಚೇರಿಯಲ್ಲಿ ಸದ್ಯ ಅಗತ್ಯ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದು, ಎಲ್ಲಿಂದ ಕೊರೋನಾ ಸೋಂಕು ತಗುಲಿತು ಎಂದು ಪತ್ತೆಕಾರ್ಯದಲ್ಲಿ ತೊಡಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ