ಲಾಕ್ ಡೌನ್ ಎಫೆಕ್ಟ್: ಶಿರಡಿ ಸಾಯಿ ಮಂದಿರಕ್ಕೆ ನಿತ್ಯ ಒಂದೂವರೆ ಕೋಟಿ ನಷ್ಟ

ಕೊರೋನಾ ಸೋಂಕು ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಪ್ರಸಿದ್ಧ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿದಿನ ಒಂದೂವರೆ ಕೋಟಿ ರೂಪಾಯಿ ಖೋತವಾಗುತ್ತಿದೆ ಎಂದು ಸಾಯಿಬಾಬಾ ಮಂದಿರ ಟ್ರಸ್ಟ್ ತಿಳಿಸಿದೆ.
ಸಾಯಿಬಾಬಾ ಮಂದಿರ
ಸಾಯಿಬಾಬಾ ಮಂದಿರ

ಮಹಾರಾಷ್ಟ್ರ: ಕೊರೋನಾ ಸೋಂಕು ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಪ್ರಸಿದ್ಧ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿದಿನ ಒಂದೂವರೆ ಕೋಟಿ ರೂಪಾಯಿ ಖೋತವಾಗುತ್ತಿದೆ ಎಂದು ಸಾಯಿಬಾಬಾ ಮಂದಿರ ಟ್ರಸ್ಟ್ ತಿಳಿಸಿದೆ.

ಮಾರ್ಚ್ 17ರಿಂದ ಮೇ 3ರವರೆಗೆ ದೇವಸ್ಥಾನ ಬಂದ್ ಆಗಿದ್ದು, ದೇವಸ್ಥಾನದ ಟ್ರಸ್ಟ್ 2.53 ಕೋಟಿ ರೂಪಾಯಿ ಸ್ವೀಕರಿಸಿದೆ. ಅಲ್ಲದೇ ಆನ್ ಲೈನ್ ಮೂಲಕ ದಿನಂಪ್ರತಿ ಆರು ಲಕ್ಷ ರೂಪಾಯಿ ದೇಣಿಗೆ ಬರುತ್ತಿದೆ ಎಂದು ವಿವರಿಸಿದೆ.

ಸಾಯಿ ಬಾಬಾ ದೇವಸ್ಥಾನ ವಾರ್ಷಿಕ ಆದಾಯ 600 ಕೋಟಿ ರೂಪಾಯಿ, ಅಂದರೆ ದಿನಂಪ್ರತಿ 1.64 ಕೋಟಿ ರೂಪಾಯಿಗಿಂತಲೂ ಹೆಚ್ಚು ಆದಾಯ ಬರುತ್ತಿತ್ತು. ಇದೀಗ ಲಾಕ್ ಡೌನ್ ನಿಂದ 1 ಕೋಟಿ 58 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com