ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ಸರ್ಕಾರದ ಬಳಿ ಮಾಹಿತಿಯಿಲ್ಲ: ಆರ್ ಟಿಐ ಮೂಲಕ ಬಹಿರಂಗ

ದೇಶದ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ತಮ್ಮ ಬಳಿ ಅಂಕಿಅಂಶ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.
ತಮ್ಮೂರಿಗೆ ತೆರಳಲು ಟ್ರಕ್ ಗೆ ಹತ್ತುತ್ತಿರುವ ವಲಸೆ ಕಾರ್ಮಿಕರು
ತಮ್ಮೂರಿಗೆ ತೆರಳಲು ಟ್ರಕ್ ಗೆ ಹತ್ತುತ್ತಿರುವ ವಲಸೆ ಕಾರ್ಮಿಕರು

ನವದೆಹಲಿ: ದೇಶದ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ತಮ್ಮ ಬಳಿ ಅಂಕಿಅಂಶ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಎಷ್ಟಿದೆ ಎಂದು ವೆಂಕಟೇಶ್ ನಾಯಕ್ ಎಂಬುವವರು ಮಾಹಿತಿ ಹಕ್ಕುಕಾಯ್ದೆಯಡಿ ಕೇಳಲಾಗಿದ್ದ ಪ್ರಶ್ನೆಗೆ ಕಾರ್ಮಿಕ ಇಲಾಖೆ ಮುಖ್ಯ ಆಯುಕ್ತ ಕಚೇರಿ ಈ ರೀತಿ ಉತ್ತರಿಸಿದೆ.

ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಎಷ್ಟು ಮಂದಿ ವಲಸೆ ಕಾರ್ಮಿಕರು ಅಲ್ಲಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಮೂರು ದಿನಗಳೊಳಗೆ ಅಂಕಿಅಂಶ ಸಂಗ್ರಹಿಸಿ ಕೊಡಿ ಎಂದು ಕಾರ್ಮಿಕ ಸಚಿವಾಲಯ ತನ್ನ ಸ್ಥಳೀಯ ಕಚೇರಿಗಳಿಗೆ ಆದೇಶ ಹೊರಡಿಸಿದ ನಂತರ ಕಾಮನ್ ವೆಲ್ತ್ ಹ್ಯೂಮನ್ ರೈಟ್ಸ್ ಸಂಸ್ಥೆ ಅಂಕಿಅಂಶ ಕೇಳಿದೆ.

ಲಾಕ್ ಡೌನ್ ನಿಂದಾಗಿ ದೇಶದಲ್ಲಿ ವಲಸೆ ಕಾರ್ಮಿಕರಿಗೆ ಬಹುದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಬಹುತೇಕ ಮಂದಿ ಸಿಕ್ಕಿಹಾಕಿಕೊಂಡಿದ್ದು ಹಲವರು ನಿರಾಶ್ರಿತ ತಾಣಗಳಲ್ಲಿ, ಮನೆ ಮಾಲೀಕರ ಕೆಲಸ ಸ್ಥಳದಲ್ಲಿ, ಕೆಲವು ಕ್ಲಸ್ಟರ್ ಗಳಲ್ಲಿ ಇದ್ದಾರೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆಯೇ ಹೊರತು ಅವರ ನಿಖರ ಸಂಖ್ಯೆ ತಿಳಿದುಬಂದಿಲ್ಲ ಎಂದಿದೆ.

ಕಾರ್ಮಿಕ ಸಚಿವಾಲಯದ ಅಧಿಕೃತ ಘೋಷಣೆ ಹೊರಬೀಳಲು ಸುಮಾರು 2 ವಾರಗಳ ತನಕ ಕಾದ ನಂತರ ನಾಯಕ್ ಆರ್ ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com