ತ್ಯಾಗರಾಜರ ಕುರಿತು ಆಕ್ಷೇಪಾರ್ಹ ಹೇಳಿಕೆ: ಕಮಲ ಹಾಸನ್ ವಿರುದ್ಧ ಸಂಗೀತಗಾರರು ಕೆಂಡಾಮಂಡಲ, ಕ್ಷಮೆಗೆ ಆಗ್ರಹ
ಅಪ್ರತಿಮ ವಾಗ್ಗೇಯಕಾರ, ಸಂತ, ತ್ಯಾಗರಾಜರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಟ ಕಮಲ ಹಾಸನ್ ವಿರುದ್ಧ ಸಂಗೀಗಾರರು ಕೆಂಡಾಮಂಡಲರಾಗಿದ್ದಾರೆ.
ನಟ ವಿಜಯ್ ಸೇತುಪತಿ ಜೊತೆಗೆ ವಿಡಿಯೋ ಚಾಟ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲಹಾಸನ್ ತಮ್ಮ ವೃತ್ತಿ ಜೀವನ ಹಾಗೂ ಸಿನಿಮಾದ ಬಗ್ಗೆ ಮಾತನಾಡುತ್ತ ತ್ಯಾಗರಾಜರನ್ನು ಉಲ್ಲೇಖಿಸಿದ್ದರು. ಈ ಹೇಳಿಕೆಯಿಂದ ಕಮಲ ಹಾಸನ್ ಸಂಗೀತಗಾರರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಖ್ಯಾತ ಸಂಗೀತಗಾರ ಪಾಲ್ಘಾಟ್ ರಾಮ್ ಪ್ರಸಾದ್ ಕಮಲ ಹಾಸನ್ ಹೇಳಿಕೆಯನ್ನು ಖಂಡಿಸಿ ಕ್ಷಮೆಗೆ ಆಗ್ರಹಿಸಿ Change.org ನಲ್ಲಿ ಸಹಿ ಸಂಗ್ರಹ ಮಾಡುತ್ತಿದ್ದಾರೆ. ಕಮಲ ಹಾಸನ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ತ್ಯಾಗರಾಜರು ತಂಜಾವೂರ್ ನ ರಸ್ತೆಗಳಲ್ಲಿ ಯಾವುದಕ್ಕೂ ಬೇಡುತ್ತಿರಲಿಲ್ಲ. ಭಗವಾನ್ ರಾಮನನ್ನು ಸ್ತುತಿಸಿ ಕೀರ್ತನೆಗಳನ್ನು ರಚಿಸಿ ಊಂಛವೃತ್ತಿಯಿಂದ ಜೀವನ ನಡೆಸುತ್ತಿದ್ದರು, ಎಂದಿಗೂ ಯಾವುದಕ್ಕೂ ತ್ಯಾಗರಾಜರು ಬೇಡಿದವರಲ್ಲ, ಆದರೆ ಕಮಲಹಾಸನ್ ಅವರ ಹೇಳಿಕೆಯಿಂದ ಭಕ್ತಿ ಮಾರ್ಗ ಅನುಸರಿಸುವ ಸಂಗೀತಗಾರರಿಗೆ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಪ್ರದಾಯದ ಹಲವಾರು ಖ್ಯಾತ ಸಂಗೀತಗಾರರು ಕಮಲಹಾಸನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆಗೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ